ಗುರುವಾರ , ಮೇ 6, 2021
23 °C
‘ಕಲ್ಯಾಣ ಕರ್ನಾಟಕ ಸಂಗೀತೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ

ಕಲಾವಿದರಿಗೆ ಅವಕಾಶ ನೀಡುವ ಜವಾಬ್ದಾರಿ ಸಮಾಜದ್ದು: ಡಾ.ರಾಘವೇಂದ್ರ ಚಿಂಚನಸೂರ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮನಸ್ಸಿಗೆ ಮುದ ನೀಡುವ ಕಾಯಕದಲ್ಲಿ ನಿರತರಾಗಿರುವ ಸಂಗೀತ ಕಲಾವಿದರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸಬೇಕಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಂಥ ‍ಪ್ರದೇಶದಲ್ಲಿ ಎಲರೆಮರೆಯ ಕಾಯಿಯಂತೆ ಇರುವ ಅಪರೂಪದ ಕಲಾವಿದರನ್ನು ಬೆಳಕಿಗೆ ತರಬೇಕಿದೆ’ ಎಂದು ಡಾ.ರಾಘವೇಂದ್ರ ಚಿಂಚನಸೂರ ಹೇಳಿದರು.

ಇಲ್ಲಿನ ರಾಮತೀರ್ಥ ನಗರದ ಜ್ಞಾನ ಸರಸ್ವತಿ ವಿದ್ಯಾಮಂದಿರ ಆವರಣದಲ್ಲಿ ಗಡಿನಾಡ ಸಂಗೀತ ಹಾಗೂ ವಿವಿಧೋದ್ದೇಶ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಕಲ್ಯಾಣ ಕರ್ನಾಟಕ ಸಂಗೀತೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಭಾರತೀಯ ಸಂಗೀತಕ್ಕೆ ಜಗತ್ತಿನಲ್ಲಿ ವಿಶಿಷ್ಟ ಮನ್ನಣೆ ಇದೆ. ಈ ನಿಟ್ಟಿನಲ್ಲಿ ಸಂಗೀತ ಆಸಕ್ತರು ಗುಣಮಟ್ಟದ ಕಾರ್ಯಕ್ರಮಗಳನ್ನು ನೀರಿಕ್ಷೆ ಮಾಡುತ್ತಾರೆ. ಅದು ಸಾಕಾರಗೊಳ್ಳಬೇಕಾದರೆ ಹೆಚ್ಚು ಕಲಾವಿದರೆ ಮುಂದೆ ಬರಬೇಕು. ಅದಕ್ಕಾಗಿ ಅವಕಾಶ ಸೃಷ್ಟಿಸುವ ಜವಾಬ್ದಾರಿ ಸಮಾಜದ ಮೇಲಿದೆ’ ಎಂದರು.

ಉದ್ಯಮಿ ಗುರುರಾಜ ಮತ್ತಿಮಡು ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ ಎಸ್ ಕೆ ಕುಂಬಾರ, ರಾಜಶೇಖರ ಯಂಕಂಚಿ, ಮಹಾದೇವಪ್ಪ ಗೊಬ್ಬುರ, ಬಸವರಾಜ ಪಾಟೀಲ, ಸೋಮಶೇಖರ ಮೂಲಗೆ, ವಿಶ್ವನಾಥ ಮಠಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದರಾದ ಶಿವರುದ್ರಯ್ಯ ಗೌಡಗಾಂವ, ಮಡಿವಾಳಯ್ಯ ಸ್ವಾಮಿ, ಅಣ್ಣಾರಾವ್‌ ಶೆಳ್ಳಗಿ, ಸೈದಪ್ಪ ಚೌಡಾಪುರ, ಸೀಮಾ ಪಾಟೀಲ, ವಿಜಯಲಕ್ಷ್ಮೀ ಕೆಂಗನಾಳ, ರೇಣುಕಾ ಪ್ರವೀಣಕುಮಾರ, ನಿರ್ಮಲ ಸಿರಗಾಪುರ, ಶಾಂತವೀರಯ್ಯ ಮಠಪತಿ, ಪ್ರಕೃತಿ ಮೇತ್ರೆ, ಸಾಕ್ಷಿ ಪಾಟೀಲ, ಸ್ವರೂಪ ವಾಲಿ, ಹಣಮಂತರಾವ ಕುಲಕರ್ಣಿ, ಶಾಂತಕುಮಾರ ಸಾವಳಗಿ, ಲಿಂಗಾನಂದ ಚಿಕ್ಕಮಠ, ಸ್ವಾಮಿ ಶಿವರಾಜ, ಸಾವಿತ್ರಿ ಪತ್ತಾರ, ಬಾಬುರಾವ್ ಕೋಬಾಳ, ದತ್ತರಾಜ ಕಲಶೆಟ್ಟಿ, ಚನ್ನವೀರಯ್ಯ ವಾಗ್ದರ್ಗಿ, ಚೇತನ ಬೀದಿಮನಿ, ರೇವಣಯ್ಯ ಸುಂಟನೂರ, ಸಂಗಣ್ಣ ಕುಂಬಾರ, ಶಿವಕವಿ ಹಿರೇಮಠ, ಉದಯಕುಮಾರ ಭೀಮಳ್ಳಿ, ರಾಚಯ್ಯ ಶಾಸ್ತ್ರೀ, ಪ್ರಶಾಂತ, ಶಂಕರ ರುದ್ರವಾಡಿ, ಗುರುಲಿಂಗಯ್ಯ ವಾಡಿ, ಮಹಾಂತೇಶ ಹರವಾಳ, ನಾಗಲಿಂಗಯ್ಯ ಸ್ಥಾವರಮಠ, ಮೌನೇಶ ಪಾಂಚಾಳ, ವೀರಯ್ಯಸ್ವಾಮಿ, ಸಿದ್ಧಲಿಂಗ ಹಡಪದ, ಸ್ವಯಂ ಸಿರಗಾಪೂರ ಸಂಗೀತ ಸೇವೆ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು