ಗುರುವಾರ , ಅಕ್ಟೋಬರ್ 22, 2020
25 °C

10 ತಿಂಗಳಿನಿಂದ ವೇತನ ಸಿಗದೆ ಸಿಬ್ಬಂದಿ ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ಸಂಸ್ಥೆಯ ಗ್ರೂಪ್‌ ಡಿ ನೌಕರರು ವೇತನ ಸಿಗದೆ ಕಂಗಾಲಾಗಿದ್ದಾರೆ.

ನವೆಂಬರ್ 2019ರಿಂದ ಸೆ.2020ರವರೆಗೆ ತಾಲ್ಲೂಕು ಆಸ್ಪತ್ರೆಯಲ್ಲಿ 15 ಜನರನ್ನು ಹೊರ ಗುತ್ತಿಗೆ ಸಂಸ್ಥೆ ದುಡಿಸಿಕೊಂಡಿದೆ. ಆದರೆ ಈವರೆಗೂ ವೇತನ ನೀಡಿಲ್ಲ ಎಂದು ನೌಕರರು ಅಲವತ್ತುಕೊಂಡಿದ್ದಾರೆ.

ತಾಲ್ಲೂಕು ಆಸ್ಪತ್ರೆಯ ಅಧಿಕಾರಿಗಳು ಹೊರ ಗುತ್ತಿಗೆ ನೌಕರರನ್ನು ಪೂರೈಸಿದ ಎಜೆನ್ಸಿಗೆ(ಸಂಸ್ಥೆ)ಗೆ ₹5,35900 ಪಾವತಿಸಲು ಸಾದಿಲ್ವಾರು ಬಿಲ್ಲು ಸಲ್ಲಿಸಿದ್ದಾರೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹ ನಿರ್ದೇಶಕರು ಗುತ್ತಿಗೆ ಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ಸಿಬ್ಬಂದಿ ಹೆಸರಲ್ಲಿ ಇಪಿಎಫ್ ಮತ್ತು ಇಜಿಐಎಸ್ ಹಣ ಭರಿಸದ ಕಾರಣ ಸಾದಿಲ್ವಾರು ಬಿಲ್ಲು ವಾಪಸ್ ಬಂದಿರುತ್ತದೆ.

ಬಿಲ್ಲು ವಾಪಸ್ ಬಂದಿದ್ದರಿಂದ ನಾವು ಸಾಲ ಮಾಡಿ ಜೀವನ ನಡೆಸುವಂತಾಗಿದೆ. ಪ್ರಯುಕ್ತ ನಮಗೆ ಬೇಗ ವೇತನ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನಾವು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೆ.22ರಂದು ಮನವಿ ಸಲ್ಲಿಸಿದ್ದೇವೆ ಎಂದು ನೌಕರ ಪ್ರಭು ಟಾಕಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಗಲಿರುಳೆನ್ನದೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಕೊರೊನಾ ಸೇವೆಯನ್ನು ನಾವು ಮಾಡುತ್ತಿದ್ದೇವೆ. ಹೀಗಿದ್ದರೂ ನಮಗೆ ವೇತನ ನೀಡದ ಸಂಸ್ಥೆಯಿಂದ ನಮಗೆ ವೇತನ ಕೊಡಿಸಿ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.