ಶನಿವಾರ, ಮೇ 28, 2022
21 °C

ನರೇಗಾ: 200 ದಿನ ಕೆಲಸ ನೀಡಿ: ಆರ್.ಕೆ.ವೀರಭದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಕೊವೀಡ್ ಸಂಕಷ್ಟದಿಂದ ಇಡೀ ದೇಶದ ಜನರ ಬದುಕಿನ ಸಂಕಷ್ಟ ಹೆಚ್ಚಾಗಿದೆ. ಹಳ್ಳಿಗಾಡಿನ ಬಡಕೂಲಿಕಾರ್ಮಿಕರ ಬದುಕು ಹೀನ ಸ್ಥಿತಿಗೆ ತಳ್ಳಲ್ಪಟ್ಟಿದ್ದು, ಸರ್ಕಾರ ನರೇಗಾ ಯೋಜನೆಯ ಮಿತಿಯನ್ನು 200 ದಿನಗಳಿಗೆ ಹೆಚ್ಚಿಸಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಕಾರ್ಯದರ್ಶಿ ಆರ್.ಕೆ.ವೀರಭದ್ರಪ್ಪ ಒತ್ತಾಯಿಸಿದರು.

‘ಜೀವ ರಕ್ಷಿಸಿ - ಜೀವನ ಉಳಿಸಿ - ಜೀವಿಸಲು ಬಿಡಿ’ ಎಂಬ ಅಭಿಯಾನದ ಭಾಗವಾಗಿ ಪಕ್ಷದ ವತಿಯಿಂದ ಜರುಗಿದ ರಾಜ್ಯವ್ಯಾಪಿ ಆನ್‌ಲೈನ್ ಚಳುವಳಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊವೀಡ್‌ನಂಥ ಕಠಿಣ ಪರಿಸ್ಥಿತಿಯಲ್ಲಿ ಸಮರ್ಪಕವಾದ ಮತ್ತು ಸೂಕ್ತವಾದ ಕ್ರಮಗಳನ್ನು ಕೈಗೊಂಡು ಯುದ್ಧೋಪಾದಿಯಲ್ಲಿ ಕೆಲಸಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್ ಸೋಕಿತರಿಗೆ ಉಚಿತ, ಗುಣಮಟ್ಟದ ಚಿಕಿತ್ಸೆ ಒದಗಿಸಿ, ಮೃತರಾದವರಿಗೆ ₹1 ಲಕ್ಷ ಪರಿಹಾರ ನೀಡಬೇಕು. ಕೋವಿಡ್ ಯೋಧರಿಗೆ ಜೀವನ ಭದ್ರತೆ ಒದಗಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ತಲಾ ₹10 ಸಾವಿರ ನೀಡಬೇಕು. ನರೇಗಾ ಕೂಲಿಯನ್ನು ₹600 ಕ್ಕೆ ಏರಿಕೆ ಮಾಡಬೇಕು ಹಾಗೂ ನಗರದಲ್ಲಿಯೂ ನರೇಗಾ ಯೋಜನೆ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು