ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶ, ರಾಜ್ಯದಲ್ಲಿ ಅಭಿವೃದ್ಧಿ ಪರ್ವ’

ಸೇಡಂ ತಾಲ್ಲೂಕು ಘಟಕದ ಅಧ್ಯಕ್ಷ ಪರ್ವತರೆಡ್ಡಿ ನಾಮವಾರ ಪದಗ್ರಹಣ
Last Updated 25 ಜನವರಿ 2020, 11:38 IST
ಅಕ್ಷರ ಗಾತ್ರ

ಸೇಡಂ: ‘ಚುನಾವಣೆಯಲ್ಲಿ ಗೆದ್ದು ತಿಂಗಳುಗಳು ಕಳೆದಿವೆ. ರಾಜಕೀಯ ಕಾರಣಾಂತರಗಳಿಂದ ಅನೇಕ ಕೆಲಸಗಳಿಗೆ ಹಿನ್ನೆಡೆಯಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಪರ್ವ ಶುರವಾಗಲಿದೆ. ಜನರ ಮತ್ತು ಕಾರ್ಯಕರ್ತರು ತಾಳ್ಮೆಯಿಂದ ಕಾದು ನೋಡಿದ್ದಲ್ಲಿ ಕಾಲವೇ ಪ್ರತ್ಯುತ್ತರವಾಗಲಿದೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ಪಟ್ಟಣದಲ್ಲಿ ಗುರುವಾರ ಬಿಜೆಪಿ ತಾಲ್ಲೂಕು ಘಟಕ ಆಯೋಜಿಸಿದ್ಧ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ ಅವರ ಅಭಿನಂದನಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸಿ ಎಂದು ಅನೇಕರು ಕೇಳಿಕೊಂಡು ಬರುತ್ತಾರೆ. ಈ ಹಿಂದೆ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸುವುದಕ್ಕಾಗಿಯೇ ಸೇಡಂನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಆದರೆ, ಸ್ಥಳೀಯವಾಗಿಯೇ ಎಲ್ಲವೂ ಆಗುವುದಿಲ್ಲ. ಜನರು ಪ್ರತಿಯೊಂದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಜೊತೆಗ ಸ್ವಾವಲಂಬಿ ಬದುಕಿನತ್ತ ಸಾಗಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿ, ‘ನಾನು ಜಿಲ್ಲಾ ಅಧ್ಯಕ್ಷನಾಗುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ನಾನು ಮಾಡಿರುವ ಸೇವೆ ಗುರುತಿಸಿ ಬಿಜೆಪಿ ನನಗೆ ಅಧ್ಯಕ್ಷನನ್ನಾಗಿ ನೇಮಿಸಿದೆ. ಪಕ್ಷ ಕೊಟ್ಟಿರುವ ಕೆಲಸವನ್ನು ಅತ್ಯಂತ ಜವಾಬ್ದಾರಿತನದಿಂದ ಮಾಡುತ್ತೇನೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ಮಾತನಾಡಿ, ‘ತಾಲ್ಲೂಕು ಅಧ್ಯಕ್ಷನಾಗಿರುವುದು ಅತ್ಯಂತ ಖುಷಿ ಇದೆ. ನಾನೊಬ್ಬನೇ ಅಧ್ಯಕ್ಷನಲ್ಲ. ಪ್ರತಿಯೊಂದು ಬೂತ್‌ಮಟ್ಟದಲ್ಲಿರುವವರು ಸಹ ಅಧ್ಯಕ್ಷರೆ’ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ನೀಲಂಗಿ, ಮುಕುಂದ ದೇಶಪಾಂಡೆ, ಅನಂತರೆಡ್ಡಿ ಪಾಟೀಲ, ವಿಜಕುಮಾರ ಆಡಕಿ, ವಿಶ್ವನಾಥರೆಡ್ಡಿ ಪಾಟೀಲ ಕುರಕುಂಟಾ, ಬಸವರಾಜ ರೇವಗೊಂಡ, ಕಲ್ಯಾಣಪ್ಪ ಪಾಟೀಲ, ಅನೀಲ ಐನಾಪೂರ, ಶಿವಲಿಂಗರೆಡ್ಡಿ ಬೆನಕನಹಳ್ಳಿ, ಶರಣು ಮೆಡಿಕಲ್, ಚಂದ್ರಶೇಖರರೆಡ್ಡಿ, ರವಿಕುಮಾರ ಭಂಟನಳ್ಳಿ, ವಿದ್ಯಾಸಾಗರ ಕುಲಕರ್ಣಿ, ನಾಗೀಂದ್ರಪ್ಪ ದುಗನೂರ, ಧರ್ಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT