ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಪ್ರಚೋದನಕಾರಿ ಹೇಳಿಕೆ ಸಲ್ಲ: ಕೆ.ನೀಲಾ

ವಿಶ್ವ ಹಿಂದೂ ಪರಿಷತ್‌ ಮುಖಂಡರ ಹೇಳಿಕೆಗೆ ಆಕ್ಷೇಪ
Last Updated 24 ಅಕ್ಟೋಬರ್ 2021, 3:26 IST
ಅಕ್ಷರ ಗಾತ್ರ

ಕಲಬುರಗಿ: ‘ಕತ್ತಿ ಹಿಡಿದರೆ ಶವ ಹೂಳಲೂ ಜಾಗ ಸಿಗದು’ ಎಂಬ ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಘಟಕದ ಸಂಚಾಲಕ ಬಸವರಾಜ್ ಅವರ ಹೇಳಿಕೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

‘ಇದು ಹಿಂಸಾತ್ಮಕ, ಉಗ್ರವಾದದ ಹೇಳಿಕೆಯಾಗಿದ್ದು, ನೆಲದ ಕಾನೂನಿಗೆ ಮತ್ತು ಸಂವಿಧಾನಕ್ಕೆ ಮಾಡಿರುವ ಅಪಮಾನ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಅವರು ಹಿಂಸಾಕೃತ್ಯದ, ಪ್ರಚೋದನಕಾರಿ ಭಾಷಣ ಮಾಡಿರುವುದಲ್ಲದೆ ಹೆಣ್ಣುಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಅಲ್ಲಿಯ ಪೊಲೀ ಸರು ಸ್ವಯಂ ಪ್ರೇರಿ ತವಾಗಿ ಪ್ರಕರಣ ದಾಖಲಿಸಿಕೊಂಡು, ಈ ಕೂಡಲೇ ಅವರನ್ನು ಬಂಧಿ ಸುವ ಕೆಲಸ ಮಾಡಬೇಕು’ ಎಂದು ಸಂಘ ಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಗೌರಮ್ಮ, ಅಧ್ಯಕ್ಷೆ ದೇವಿ, ಉಪಾಧ್ಯಕ್ಷೆ ಕೆ.ನೀಲಾ ಮತ್ತು ಸದಸ್ಯೆ ನಂದಾದೇವಿ ಮಂಗೊಂಡಿ ಅವರು
ಒತ್ತಾಯಿಸಿದ್ದಾರೆ.

‘ಇಂಥ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ’ ಎಂದು ಹೇಳಿದರು.

ಕ್ರಿಯೆಗೆ ಪ್ರತಿಕ್ರಿಯೆ ಅನಿವಾರ್ಯ ಎಂಬರ್ಥದ ಹೇಳಿಕೆಯನ್ನು ಮುಖ್ಯಮಂತ್ರಿಯವರು ನೀಡಿದ್ದರಿಂದಲೇ ಇಷ್ಟೆಲ್ಲ ಬೆಳವಣಿಗೆಗೆ ಕಾರಣವಾಗಿದೆ. ಇದಕ್ಕೆ ಪೂರ್ಣಪ್ರಮಾಣದ ಕಡಿವಾಣ ಹಾಕಿ, ರಾಜ್ಯದ ಸೌಹಾರ್ದ ಪರಂಪರೆ ಉಳಿಸಲು ಅವರು ಮುಂದಾಗಬೇಕು’ ಎಂದಿದ್ದಾರೆ.

‘ವಿಶ್ವ ಹಿಂದೂ ಪರಿಷತ್‌ ಮತ್ತು ಹಿಂದೂ ಜಾಗರಣ ವೇದಿಕೆಯ ಮುಖಂಡರು ಭಾರತದ ಬಹುಸಾಂಸ್ಕೃತಿಕ ಪರಂಪರೆಯ ವಿರುದ್ಧ ಮಾತನಾಡಿದ್ದಾರೆ. ಹಿಂಸಾ ಧರ್ಮ ರಾಜಕಾರಣ ಈ ನೆಲದ ಮೌಲ್ಯವಲ್ಲ. ಅದು ಫ್ಯಾಸಿಸಂ ಮೌಲ್ಯ. ಈ ಸಂಘಟನೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT