ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ರಸ್ತೆಯಲ್ಲಿ ಸಿಕ್ಕ ₹ 1.5 ಲಕ್ಷ ಠಾಣೆಗೆ ತಂದು ಒಪ್ಪಿಸಿದ ಮೇಸ್ತ್ರಿ

Last Updated 12 ಜುಲೈ 2022, 7:13 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ಪಟ್ಟಣದಲ್ಲಿ ಬೆಳಿಗ್ಗೆ ಉಪಹಾರ ಸೇವಿಸಲು ದುರ್ಗಾ ಭವನ ಹೋಟೆಲ್ ಗೆ ಹೋಗುವಾಗ ಸಿಕ್ಕ ₹ 1.5ಲಕ್ಷ ಹಣ ಠಾಣೆಗೆ ತಂದು ನೀಡುವ ಮೂಲಕ ಕಟ್ಟಡ ನಿರ್ಮಾಣದ ಮೇಸ್ತ್ರಿ ಶರಣು ನಿರ್ಣಾ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಮಂಗಳವಾರ ಬೆಳಿಗ್ಗೆ ಪಟ್ಟಣದ ಶೆಳ್ಳಗಿ ಡ್ರೆಸ್ಸೆಸ್ ಮಾಲೀಕ ಲೋಕೇಶ ಶೆಳ್ಳಗಿ ಬ್ಯಾಂಕಿಗೆ ತುಂಬಲು ₹ 1.5 ಲಕ್ಷ ಹಣದೊಂದಿಗೆ ಮಳೆಯಲ್ಲಿ ಬೈಕ್ ಮೇಲೆ ತೆರಳುವಾಗ ಹಣದ ಚೀಲ ಬಿದ್ದಿದೆ. ಆಗ ದಾರಿಯಲ್ಲಿ ಬಂದ ಶರಣು ನಿರ್ಣಾ ಚೀಲ ತೆಗೆದುಕೊಂಡು ಚಿಂಚೋಳಿ ಠಾಣೆಗೆ ತೆರಳಿ ಠಾಣೆಯಲ್ಲಿದ್ದ ಹೆಡ್ ಕಾನ್ ಸ್ಟೆಬಲ್ ಗೌರಿಶಂಕರ ಅವರಿಗೆ ಹಣ ಒಪ್ಪಿಸಿದ್ದಾರೆ. ಇಷ್ಟರಲ್ಲಿಯೇ ಬ್ಯಾಂಕಿಗೆ ಹೋಗಿ ನೋಡಿದ ಲೋಕೇಶ ಹಣದ ಚೀಲವಿಲ್ಲದೇ ಕಕ್ಕಾಬಿಕ್ಕಿಯಾಗಿದ್ದಾರೆ. ಆಗ ಠಾಣೆಗೆ ಬಂದಿದ್ದಾರೆ.

ಠಾಣಾಧಿಕಾರಿಗಳು ಪರಿಶೀಲಿಸಿ ಹಣ ಮರಳಿಸಿದರು.

ಪ್ರಾಮಾಣಿಕತೆ ಮೆರೆದ ಶರಣು ನಿರ್ಣಾ ಅವರಿಗೆ ಪೊಲೀಸರ ಸಮ್ಮುಖದಲ್ಲಿ ಲೋಕೇಶ ಶೆಳ್ಳಗಿ ಸನ್ಮಾನಿಸಿ‌ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ‌ ಡಿವೈಎಸ್ಪಿ ಕಚೇರಿಯ ಹೆಡ್ ಕಾನಸ್ಟೆಬಲ್ ರೇವಣಸಿದ್ದ ಹೂವಿನಭಾವಿ, ಠಾಣೆಯ ಸಿಬ್ಬಂದಿಗಳಾದ ಶಿವಾನಂದ ಮತ್ತು ಶಿಲ್ಪಕಲಾ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT