ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದು ಲಕ್ಷ ಪತ್ರ ಅಭಿಯಾನ ಸಂಕಲ್ಪ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಲು ಒತ್ತಾಯ
Published : 20 ಆಗಸ್ಟ್ 2024, 5:27 IST
Last Updated : 20 ಆಗಸ್ಟ್ 2024, 5:27 IST
ಫಾಲೋ ಮಾಡಿ
Comments

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರನ್ನು ಇಡುವಂತೆ ಒತ್ತಾಯಿಸಿ ಹಮ್ಮಿಕೊಂಡ ಪತ್ರ ಚಳವಳಿ ಅಭಿಯಾನಕ್ಕೆ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ ಹಾಗೂ ದಾಕ್ಷಾಯಿಣಿ ಎಸ್. ಅಪ್ಪ ಅವರು ಚಾಲನೆ ನೀಡಿದರು.

ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ದಯಾನಂದ ಪಾಟೀಲ, ಯುವ ಮುಖಂಡ ಶ್ರೀಧರ ಎಂ. ನಾಗನಹಳ್ಳಿ ಮಾತನಾಡಿ, ‘ಕೇಂದ್ರ ಸರ್ಕಾರದ ಗಮನಕ್ಕೆ ತರಲು ಕೆಲವು ದಿನಗಳ ಹಿಂದೆ ಟ್ವಿಟರ್ ಟ್ರೆಂಡ್ ಮಾಡಲಾಗಿತ್ತು. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಲಕ್ಷ ಪತ್ರ ಬರೆಯುವ ಮೂಲಕ ಆಗ್ರಹ ಮಾಡಲಾಗುತ್ತಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಮಠಾಧೀಶರ ನೇತೃತ್ವದಲ್ಲಿ ಸಮುದಾಯದ ಮುಖಂಡರು ರಾಜಕೀಯ ಧುರೀಣರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಮಾಡಿ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ಸಚಿವರಿಗೋ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಪತ್ರ ಚಳವಳಿ ಆರಂಭದ ಮೊದಲ ದಿನವೇ ಸುಮಾರು 20 ಸಾವಿರಕ್ಕೂ ಹೆಚ್ಚಿನ ಜನರು ಬೆಂಬಲ ನೀಡಿ ಪತ್ರ ಬರೆದಿದ್ದಾರೆ.

ಈ ಸಂದರ್ಭದಲ್ಲಿ ಡಾ.ಅಲ್ಲಮಪ್ರಭು ದೇಶಮುಖ, ಮುಖಂಡರಾದ್ ವಿನೋದ ಪಾಟೀಲ ಸರಡಗಿ, ಸಂಘಟನೆಯ ಉಪಾಧ್ಯಕ್ಷ ಕಲ್ಯಾಣರಾವ್‌ ಪಾಟೀಲ ಕಣ್ಣಿ, ಮಹೇಶ್ ಚಂದ್ರ ಪಾಟೀಲ, ಸಂಘಟನಾ ಕಾರ್ಯದರ್ಶಿ ಆನಂದ ಕಣಸೂರ, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಕಿರಣ್ ಕಣ್ಣಿ, ಆಕಾಶ ಕುಲಕರ್ಣಿ, ಸುನೀಲ್ ಮಹಾಗಾಂವಕರ್‌, ಪ್ರಭವ್ ಪಟ್ಟಣಕರ, ಅಭಿಷೇಕ್ ನಾಗನಹಳ್ಳಿ, ಗುರುರಾಜ್ ಸುಂಟನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT