ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಎಂ.ಎಸ್ಸಿ ಪರೀಕ್ಷೆ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳು ಮುದ್ರಣ

Last Updated 22 ಜುಲೈ 2022, 4:37 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಗುರುವಾರ ನಡೆದ ಸ್ನಾತಕೋತ್ತರ ಪದವಿಯ ಎಂ.ಎಸ್ಸಿ ಪ್ರಥಮ ಸೆಮಿಸ್ಟರ್‌ನ ಗಣಿತ ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿರುವ ಆರೋಪ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.

ಪ್ರಶ್ನೆ ಪತ್ರಿಕೆಯ ಶೀರ್ಷಿಕೆಯಲ್ಲಿ ಗಣಿತ ಎಂದು ಸರಿಯಾಗಿ ಮುದ್ರಣವಾಗಿದ್ದರೂ ಪ್ರಶ್ನೆಗಳು ಮಾತ್ರ ಪಠ್ಯರಹಿತವಾಗಿದ್ದವು. ಇದರಿಂದ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೆ ಒಳಗಾದರು. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಮಾದ ಗಮನಕ್ಕೆ ಬರುತ್ತಿದ್ದಂತೆ ಕೊಠಡಿಯ ಮೇಲ್ವಿಚಾರಕರು ವಿಶ್ವವಿದ್ಯಾಲಯದ ಮೌಲ್ಯಮಾಪನ ಅಧಿಕಾರಿಗಳ ಗಮನಕ್ಕೆ ತಂದರು. ಆಗ ಅವರು ಇ–ಮೇಲ್‌ ಮುಖಾಂತರ ಸರಿಯಾದ ಪ್ರಶ್ನೆ ಪತ್ರಿಕೆ ಕಳುಹಿಸಿದರು.

ಪ್ರಶ್ನೆ ಪತ್ರಿಕೆಗಳನ್ನು ಇ–ಮೇಲ್ ಮಾಡಿದರೂ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಎರಡೂವರೆಗ ಗಂಟೆ ತಡವಾಗಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಯಿತು ಎಂದು ಕೆಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಿಗ್ಗೆ 10ಕ್ಕೆ ಕೊಟ್ಟ ಪ್ರಶ್ನೆ ಪತ್ರಿಕೆಯನ್ನು ನೋಡಿದಾಗ ಅದರಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳ ಬಂದಿದ್ದವು. ಇದನ್ನು ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತರುತ್ತಿದ್ದಂತೆ ಅವರು ವಿವಿಯ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ, ‘ವಿದ್ಯಾರ್ಥಿಗಳನ್ನು ಅಲ್ಲಿಯೇ ಕೂಡಿಸಿ, ಬದಲಿ ಪ್ರಶ್ನೆ ಪತ್ರಿಕೆ ಕೊಡುತ್ತೇವೆ’ ಎಂದರು. ಯಾರೋ ಮಾಡಿದ ತಪ್ಪನಿಂದ ಸಾವಿರಾರು ವಿದ್ಯಾರ್ಥಿಗಳು ಎರಡೂವರೆ ಗಂಟೆಪರೀಕ್ಷಾ ಕೋಣೆಯಲ್ಲಿ ಸುಮ್ಮನೆ ಕೂರಬೇಕಾಯಿತು. ಮಧ್ಯಾಹ್ನ 12.30ಕ್ಕೆ ಪ್ರಶ್ನೆಪತ್ರಿಕೆ ಪಡೆದು 2.30ರವಗೂ ಪರೀಕ್ಷೆ ಬರೆದರು’ ಎಂದು ವಿದ್ಯಾರ್ಥಿಯೊಬ್ಬ ಬೇಸರ ವ್ಯಕ್ತಪಡಿಸಿದರು.

‘ಪ್ರಶ್ನೆ ಪತ್ರಿಕೆಯಲ್ಲಿ ಶೀರ್ಷಿಕೆ ಸರಿಯಾಗಿ ಇತ್ತು. ಆದರೆ, ಪ್ರಶ್ನೆಗಳನ್ನು ಪಠ್ಯದಲ್ಲಿ ಇರದಂತಹವು ಬಂದಿದ್ದವು. ಒಪನ್‌ ಎಲೆಕ್ಟಿವ್‌ನಲ್ಲಿ ಗೊಂದಲ ಮಾಡಿ ಡು ಬೇರೆ ಪ್ರಶ್ನೆಕೊಟ್ಟಿದ್ದಾರೆ. ನಾವು ಆಯ್ಕೆ ಮಾಡಿರಲಿಲ್ಲ. ಆದರೆ, ಅವರು ಆಯ್ಕೆಗಳನ್ನು ಕೊಟ್ಟಿದ್ದರು’ ಎಂದು ಪರೀಕ್ಷಾರ್ಥಿ ಅಕ್ಷಯ್ ತಿಳಿಸಿದರು.

‘ನೋಟಿಸ್ ಜಾರಿ’
‘ಪ್ರಶ್ನೆ ಪತ್ರಿಕೆಯ ಮೇಲಿನ ಗಣಿತ ಶೀರ್ಷಿಕೆ ಸರಿಯಾಗಿದೆ. ಆದರೆ, ಒಳಗಡೆಯ ಪ್ರಶ್ನೆಗಳು ತಪ್ಪಾಗಿ ಬಂದಿವೆ. ಇದು ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದವರು ಮಾಡಿದ ತಪ್ಪು’ ಎಂದುಗುಲಬರ್ಗಾ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್‌.ಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲೋಪ ಕಂಡು ಬರುತ್ತಿದ್ದಂತೆ ಗಣಿತ ವಿಭಾಗದ ಮುಖ್ಯಸ್ಥರನ್ನು ಕರೆಯಿಸಿ ಈ ಬಗ್ಗೆ ವಿಚಾರಿಸಿ, ಸರಿಯಾದ ಪ್ರಶ್ನೆ ಪತ್ರಿಕೆಯನ್ನು ಇ–ಮೇಲ್‌ ಮೂಲಕ ಕಳುಹಿಸಲಾಗಿದೆ. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ವಿತರಣೆ ವಿಳಂಬವಾಗಿದೆ. ಪೇಪರ್ ಸೆಟ್ ಮಾಡಿದವರಿಗೆ ನೋಟಿಸ್ ನೀಡಲಾಗುವುದು. ಮುಂದಿನ ಪ್ರಶ್ನೆ ಪತ್ರಿಕೆಯನ್ನು ಮರು ಮುದ್ರಣಕ್ಕೆ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT