ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರಿಗೆ ಕೀರ್ತಿ ತರುವ ಸಾಧನೆ ಮಾಡಿ: ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ

ಕನ್ನಡ ರಾಜ್ಯೋತ್ಸವ
Last Updated 30 ನವೆಂಬರ್ 2021, 4:01 IST
ಅಕ್ಷರ ಗಾತ್ರ

ಕಲಬುರಗಿ: ‘ಪೋಷಕರು ಬಹಳ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಕ್ಕಳು ಸಾಧನೆ ಮಾಡಬೇಕು’ ಎಂದು ಕಿರುತೆರೆ ನಟಿ ಮೋಕ್ಷಿತಾ ಪೈ ತಿಳಿಸಿದರು.

ನಗರದಲ್ಲಿ ಸೋಮವಾರ ಜೈ ಕನ್ನಡಿಗರ ಸೇನೆ ವತಿಯಿಂದ ನಡೆದ 66ನೇ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೇಗೆ ನೀವು ಮುಗಿಬಿಳುತ್ತೀರೋ ಹಾಗೆ, ಮುಂದೆ ನಿಮ್ಮ ಸೆಲ್ಫಿಗಾಗಿ ಎಲ್ಲರೂ ಸರದಿಯಲ್ಲಿ ನಿಲ್ಲಬೇಕು. ಅಂಥ ಸಾಧನೆ ಮಾಡಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಕನ್ನಡ ಅಭಿಮಾನದಿಂದ ಹೆಚ್ಚಿನ ನಾಡು–ನುಡಿ ರಕ್ಷಣೆಗೆ ಶ್ರಮಿಸಿರಿಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಡಾ.ಅಜಯ ಸಿಂಗ್ ಕನ್ನಡದೇವಿಗೆ ಪೂಜೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಪ್ರಾಸ್ತಾವಿಕ ಮಾತನಾಡಿದರು.

ಸೇನೆ ಅಧ್ಯಕ್ಷ ದತ್ತು ಭಾಸಗಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ, ಪ್ರಮುಖರಾದ ಜಗನ್ನಾಥ ಸೂರ್ಯವಂಶಿ, ದಶರಥ ಕಣಮಸ್ ಇದ್ದರು. ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಸಮಾಜ ಸೇವಕ ಡಾ.ಎ.ಎಸ್.ಭದ್ರಶೆಟ್ಟಿ, ಮಂಜುನಾಥ ಕಂಬಾಳಿಮಠ, ಸಲ್ಮಾನ ಪಟೇಲ್, ಪ್ರಗತಿಪರ ಕೃಷಿಕ ಆದಿನಾಥ ಹೀರಾ, ಪತ್ರಕರ್ತರಾದ ಶರಣಯ್ಯ ಹಿರೇಮಠ, ಪ್ರಭುಲಿಂಗ ನೀಲೂರೆ ಸೇರಿದಂತೆ ಹಲವರಿಗೆ ಅಮೂಲ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT