ಗುರುವಾರ , ಆಗಸ್ಟ್ 5, 2021
21 °C

ವಿಡಿಯೊ ಗೇಮ್‌ ಆಡದಂತೆ ಬೈದ ಪಾಲಕರು: ಮನನೊಂದ ಬಾಲಕ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಮೊಬೈಲ್‌ನಲ್ಲಿ ವಿಡಿಯೊ ಗೇಮ್ ಆಡದಂತೆ ಪಾಲಕರು ಬೈದಿದಕ್ಕೆ ಮನನೊಂದ ಬಾಲಕನೊಬ್ಬ ಶುಕ್ರವಾರ ನಸುಕಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ಬ್ರಹ್ಮಪುರ ಬಡಾವಣೆಯ ರಾಹುಲ್ ಸೊಲ್ಲಾಪುರ (15) ಆತ್ಮಹತ್ಯೆ ಮಾಡಿಕೊಂಡವ. ಕಳೆದ ಕೆಲವು ವರ್ಷಗಳಿಂದ ಮೊಬೈಲ್‌ ವಿಡಿಯೊ ಗೇಮ್‌ಗೆ ಮಾರುಹೋಗಿದ್ದ ಈತ, ದಿನದ ಬಹುಭಾಗ ಅದರಲ್ಲೇ ಕಳೆಯುತ್ತಿದ್ದ. ಇದೇ ವಿಚಾರವಾಗಿ ತಂದೆ–ತಾಯಿ ಹಲವು ಬಾರಿ ಬುದ್ಧಿವಾದ ಹೇಳಿದ್ದರು. ಗುರುವಾರ ಕೂಡ ದಿನವಿಡೀ ವಿಡಿಯೊ ಗೇಮ್‌ ಆಡುವುದರಲ್ಲೇ ಕಳೆದ. ಇದನ್ನು ಕಂಡು ಪಾಲಕರು ಗದರಿಸಿದ್ದರು.

ಇಷ್ಟಕ್ಕೆ ಬೇಸರ ಮಾಡಿಕೊಂಡ ಬಾಲಕ, ಮನೆಯಲ್ಲಿಯೇ ಫ್ಯಾನ್‌ಗೆ ಹಗ್ಗ ಹಾಕಿ ನೇಣಿಗೆ ಶರಣಾಗಿದ್ದಾನೆ. ವಿಷಯ ಬೆಳಿಗ್ಗೆ ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು