ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ನೇ ಪೀಠಾಧಿಪತಿಯಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ

ಶರಣಬಸವೇಶ್ವರ ಸಂಸ್ಥಾನದಲ್ಲಿ ಪಟ್ಟಾಧಿಕಾರ ಮಹೋತ್ಸವ
Last Updated 7 ಫೆಬ್ರುವರಿ 2022, 14:33 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಶರಣಬಸವೇಶ್ವರ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು, 9ನೇ ಪೀಠಾಧಿಪತಿಯಾಗಿರುವ ತಮ್ಮ ಪುತ್ರ, ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ವಿಧ್ಯುಕ್ತವಾಗಿ ಪಟ್ಟಾಧಿಕಾರ ಹಸ್ತಾಂತರಿಸಿದರು.

ಚಿರಂಜೀವಿ ದೊಡ್ಡಪ್ಪ ಅಪ್ಪ 2017ರ ನವೆಂಬರ್‌ 1ರಂದು ಜನಿಸಿದ್ದು,200 ವರ್ಷಗಳ ಇತಿಹಾಸ ಹೊಂದಿರುವ ಶರಣಬಸವೇಶ್ವರ ದಾಸೋಹ ಸಂಸ್ಥಾನ ಪೀಠಕ್ಕೆ ಆಯ್ಕೆಯಾದ ಪೀಠಾಧಿಪತಿಗಳ ಪೈಕಿಅತ್ಯಂತ ಕಿರಿಯರು.

ಸೋಮವಾರ ನಡೆದ ಸರಳ ಸಮಾರಂಭದಲ್ಲಿಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯರ ಸಮ್ಮುಖದಲ್ಲಿ ಸಂಸ್ಥಾನದ ಪರಂಪರೆಯಾದ ‍‍‍ಪರುಷ ಬಟ್ಟಲು, ಲಿಂಗ ಸಜ್ಜಿಕೆ ಹಾಗೂ ಮನೆಯ ಸಂಪೂರ್ಣ ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು.

ಬಳಿಕ ಮಾತನಾಡಿದ ಡಾ.ಶರಣಬಸವಪ್ಪ ಅಪ್ಪ, ‘ನಾನು 1983ರಿಂದ 8ನೇ ಪೀಠಾಧಿಪತಿಯಾಗಿದ್ದೇನೆ. ಅನ್ನ ದಾಸೋಹದ ಆಚರಣೆ ಮತ್ತು ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶದಿಂದ ನನ್ನ ಮಗ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರನ್ನು ನನ್ನ ಉತ್ತರಾಧಿಕಾರಿಯಾಗಿ 2019ರಲ್ಲಿ ಪ್ರತಿಷ್ಠಾಪಿಸಿದ್ದೇನೆ. ಈಗ ಅವರು 9ನೇ ಪೀಠಾಧಿಪತಿಯಾಗಿದ್ದಾರೆ’ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ರಾದ ದಾಕ್ಷಾಯಣಿ ಎಸ್. ಅಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT