ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಕಲಬುರ್ಗಿ: ಕೌಟುಂಬಿಕ ಕಲಹ: ವ್ಯಕ್ತಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಮಿರಿಯಾಣ ಬಳಿಯ ಕಲ್ಲುಗಣಿಯಲ್ಲಿ ತೆಲಂಗಾಣ ಪದಪೆದ್ದಮುಲ ಮಂಡಲ ವ್ಯಾಪ್ತಿಯ ಭಾವಿಮುಡಿ ತಾಂಡಾದ ವ್ಯಕ್ತಿಯನ್ನು ಕೊಲೆ ಮಾಡಿದ್ದು, ಸೋಮವಾರ ಶವ ಪತ್ತೆಯಾಗಿದೆ.

‘ತೆಲಂಗಾಣದ ಭಾವಿಮುಡಿ ತಾಂಡಾದ ಭದ್ರು ಥಾವರು ರಾಠೋಡ್ (45) ಕೊಲೆಯಾದವರು. ಮಗಳ ಪ್ರೇಮವಿವಾಹದ ವಿಚಾರವಾಗಿ ಪತಿ– ಪತ್ನಿ ಮಧ್ಯೆ ನಡೆಯುತ್ತಿದ್ದ ಕಲಹವೇ ಕಾರಣವಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿದಿದೆ’ ಎಂದು ಡಿವೈಎಸ್ಪಿ ಬಸವರಾಜ ಹೀರಾ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ ಮಾಹಿತಿ ನೀಡಿದ್ದಾರೆ. ಮಿರಿಯಾಣ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಇಂದುಮತಿ ಪ್ರಕರಣ ಬೇಧಿಸಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.