ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಲಾಸ್ಟಿಕ್ ಮುಕ್ತ ಅಭಿಯಾನ ‘ಪ್ಲಾಗಾಥಾನ್‌’ಗೆ ಚಾಲನೆ

Published : 16 ಸೆಪ್ಟೆಂಬರ್ 2024, 15:44 IST
Last Updated : 16 ಸೆಪ್ಟೆಂಬರ್ 2024, 15:44 IST
ಫಾಲೋ ಮಾಡಿ
Comments

ಕಲಬುರಗಿ: ಕಲ್ಯಾಣ ಕರ್ನಾಟಕದ ದಶಮಾನೋತ್ಸವ ಅಂಗವಾಗಿ ಮಹಾನಗರ ಪಾಲಿಕೆ, ಕೆಕೆಆರ್‌ಡಿಬಿ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ಏಕ ಬಳಕೆಯ ಪ್ಲಾಸ್ಟಿಕ ನಿಷೇಧದ ಕುರಿತು ಅರಿವು ಮೂಡಿಸಲು ಪ್ಲಾಸ್ಟಿಕ ಮುಕ್ತ ಅಭಿಯಾನ ‘ಪ್ಲಾಗಾಥಾನ್‌’ ಯಶಸ್ವಿಯಾಗಿ ನಡೆಯಿತು.

ಏಕಬಳಕೆಯ ಪ್ಲಾಸಿಕ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಪಾಲಿಕೆಗೆ ನೀಡಿದ ತಂಡಕ್ಕೆ ಇದೇ ಸಂದರ್ಭದಲ್ಲಿ ಮೊದಲ ಬಹುಮಾನ ₹15,000, ದ್ವಿತೀಯ ಬಹುಮಾನ ₹10,000 ಹಾಗೂ ಮೂರನೇ ಬಹುಮಾನ ₹5,000 ವಿತರಿಸಲಾಯಿತು. ಪದವಿ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಹಾಗೂ 18 ವರ್ಷ ಮೇಲ್ಪಟ್ಟ ನಾಗರಿಕರು, ಸಂಘ ಸಂಸ್ಥೆ, ಇತ್ಯಾದಿ ತಂಡಕ್ಕೆ ಬಹುಮಾನ ವಿತರಿಸಲಾಯಿತು.

ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ‘ಪ್ಲಾಗಾಥಾನ್‌’ಗೆ ಚಾಲನೆ ನೀಡಿದರು.

ಸ್ವಚ್ಛ ಸರ್ವೇಕ್ಷಣ–2024 ಬ್ರಾಂಡ್ ಅಂಬಾಸಿಡರ್ ಆಗಿ ಯುನೈಟೆಡ್‌ ಆಸ್ಟತ್ರೆಯ ವೈದ್ಯ ವಿಕ್ರಂ ಸಿದ್ದಾರೆಡ್ಡಿ ಅವರನ್ನು ನೇಮಿಸಲಾಗಿದ್ದು, ಪ್ರಮಾಣ ಪತ್ರ ವಿತರಿಸಲಾಯಿತು.

ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ್ ಬಾಬು, ಶಾಸಕ ಅಲ್ಲಮಪ್ರಭು ಪಾಟೀಲ, ಮೇಯರ್ ಯಲ್ಲಪ್ಪ ನಾಯ್ಕೊಡಿ, ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್‌, ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ, ಡಾ. ದಾವೂದ್ ಅಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT