ಪಿಒಎಸ್) ಯಂತ್ರ ಅಳವಡಿಕೆ: 55,941 ಟನ್ ರಸಗೊಬ್ಬರ ಮಾರಾಟ

7
ಯಂತ್ರ ಅಳವಡಿಕೆ ರೈತರಿಗೆ ಅನುಕೂಲಕ

ಪಿಒಎಸ್) ಯಂತ್ರ ಅಳವಡಿಕೆ: 55,941 ಟನ್ ರಸಗೊಬ್ಬರ ಮಾರಾಟ

Published:
Updated:
Deccan Herald

ಕಲಬುರ್ಗಿ: ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರದ ಮೂಲಕ ರೈತರಿಗೆ ರಸಗೊಬ್ಬರ ವಿತರಿಸುವಲ್ಲಿ ಕೃಷಿ ಇಲಾಖೆಯು ಬಹುತೇಕ ಯಶಸ್ವಿಯಾಗಿದೆ.

ಜಿಲ್ಲೆಯಲ್ಲಿ 140 ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ 322 ಅಧಿಕೃತ ರಸಗೊಬ್ಬರ ಮಾರಾಟಗಾರರು ಇದ್ದಾರೆ. ಈ ಪೈಕಿ 307 ಕಡೆ ಈಗಾಗಲೇ ಪಿಒಎಸ್‌ ಯಂತ್ರದ ಮೂಲಕ ಮುಂಗಾರು ಹಂಗಾಮಿನಲ್ಲಿ 55,941 ರಸಗೊಬ್ಬರ ಮಾರಾಟ ಮಾಡಲಾಗಿದೆ. ರೈತರಿಗೆ ಸಿಗಬೇಕಾದ ಸಬ್ಸಿಡಿಯು ನೇರವಾಗಿ ಅವರ ಖಾತೆಗೆ ಜಮಾ ಆಗುವ ವ್ಯವಸ್ಥೆ ಇದರಲ್ಲಿದೆ.

ನಾಗಾರ್ಜುನ ಫರ್ಟಿಲೈಜರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಕಂಪನಿಯು ರಸಗೊಬ್ಬರ ಮಾರಾಟಗಾರರಿಗೆ ಪಿಒಎಸ್‌ ಯಂತ್ರಗಳನ್ನು ಸರಬರಾಜು ಮಾಡಿದೆ. ಈ ಪೈಕಿ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ 50 ಯಂತ್ರಗಳನ್ನು ಅಳವಡಿಸಲಾಗಿದೆ. ರೈತರ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಪಹಣಿಯಲ್ಲಿನ ವಿವರಗಳನ್ನು ಪಿಒಎಸ್ ಈ ಯಂತ್ರಗಳಲ್ಲಿ ಅಳವಡಿಸಲಾಗಿದೆ. ಇದರಿಂದ ರೈತರು ತಾವು ಬಯಸಿದಾಗ ರಸಗೊಬ್ಬರ ಪಡೆಯಬಹುದಾಗಿದೆ.

ನಿಗದಿತ ಬೆಲೆಯಲ್ಲಿ ಮತ್ತು ಸಕಾಲಕ್ಕೆ ರೈತರಿಗೆ ರಸಗೊಬ್ಬರ ಸಿಗಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಹೀಗಾಗಿಯೇ ಪಿಒಎಸ್ ಮೂಲಕ ರಸಗೊಬ್ಬರ ಮಾರಾಟ ಮಾಡುವುದನ್ನು ಈ ವರ್ಷದಿಂದಲೇ ಕಡ್ಡಾಯಗೊಳಿಸಲಾಗಿದೆ.

‘ಪಿಒಎಸ್‌ ಮೂಲಕ ರಸಗೊಬ್ಬರ ಮಾರಾಟ ಮಾಡುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಪಹಣಿ ಹಾಜರುಪಡಿಸಿ ರೈತರು ರಸಗೊಬ್ಬರ ಖರೀದಿಸುತ್ತಾರೆ. ಸಬ್ಸಿಡಿ ಹಣ ಅವರ ಖಾತೆಗೆ ಜಮಾ ಆಗುತ್ತದೆ. ಮೊದಲ ಪ್ರಯತ್ನದಲ್ಲೇ ಬಹುತೇಕ ಕಡೆ ಪಿಒಎಸ್‌ ಯಂತ್ರಗಳನ್ನು ಅಳವಡಿಸಿದ್ದೇವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಿತೇಂದ್ರನಾಥ ಸೂಗೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಫಜಲಪುರದಲ್ಲಿ 35, ಆಳಂದ 44, ಚಿಂಚೋಳಿ 13, ಚಿತ್ತಾಪುರ 33, ಜೇವರ್ಗಿ 94, ಕಲಬುರ್ಗಿ 52, ಸೇಡಂ 23 ಕಡೆ ಪಿಒಎಸ್ ಯಂತ್ರದ ಮೂಲಕವೇ ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಸರ್ವರ್‌ನಿಂದಾಗಿ ಕೆಲಹೊತ್ತು ಸಮಸ್ಯೆಯಾಗಿದೆ. ಆದಾಗ್ಯೂ ವಿತರಕರು ಸಮಯಕ್ಕೆ ಸರಿಯಾಗಿ ರಸಗೊಬ್ಬರ ಮಾರಾಟ ಮಾಡಿದ್ದಾರೆ’ ಎಂದು ತಿಳಿಸಿದರು.

‘ಹಿಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲಾಗಿದೆ. ಕಡಲೆ, ಶೇಂಗಾ, ಕುಸುಬಿ, ಗೋಧಿ ಸೇರಿದಂತೆ 65ರಿಂದ 70 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಲಭ್ಯ ಇವೆ. ಮುಂಗಾರು ಹಂಗಾಮಿನಲ್ಲಿ ಕೆಲವೆಡೆ ಮಳೆ ಕೈಕೊಟ್ಟಿದ್ದರಿಂದ ಬೆಳೆ ನಷ್ಟವಾಗಿದೆ. ಹೀಗಾಗಿ ಈ ಬಾರಿ ನಿಗದಿಗಿಂತ ಹಿಂಗಾರು ಬಿತ್ತನೆ ಕ್ಷೇತ್ರ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ರಸಗೊಬ್ಬರ ಮಾರಾಟ

ಯೂರಿಯಾ;17,347 ಟನ್
ಡಿಎಪಿ;31,032 ಟನ್
ಎಂಒಪಿ;1,180 ಟನ್
ಕಾಂಪ್ಲೆಕ್ಸ್;6,382 ಟನ್

ಜಿಲ್ಲೆಯ ವಿತರಕರ ವಿವರ

ಬಿತ್ತನೆ ಬೀಜ;350
ರಸಗೊಬ್ಬರ;322
ಕೀಟನಾಶಕ;385

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !