ಕಾಂಗ್ರೆಸ್‌ ಹಣ ಹಂಚಿಕೆ ಆರೋಪ: ಪೊಲೀಸ್​ ವಾಹನದ ಎದುರು ಉಮೇಶ್​ ಜಾಧವ್ ಪ್ರತಿಭಟನೆ

ಬುಧವಾರ, ಜೂನ್ 19, 2019
26 °C

ಕಾಂಗ್ರೆಸ್‌ ಹಣ ಹಂಚಿಕೆ ಆರೋಪ: ಪೊಲೀಸ್​ ವಾಹನದ ಎದುರು ಉಮೇಶ್​ ಜಾಧವ್ ಪ್ರತಿಭಟನೆ

Published:
Updated:

ಚಿಂಚೋಳಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಖಾನಾಪುರದಲ್ಲಿ ಮತದಾರರಿಗೆ ಕಾಂಗ್ರೆಸ್‌ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಉಮೇಶ್​ ಜಾಧವ್​ ಪೊಲೀಸ್​ ವಾಹನದ ಎದುರು ಕುಳಿತು ಪ್ರತಿಭಟನೆ ನಡೆಸಿದರು.

ಉನೇಶ್ ಜಾಧವ್ ತಾಲ್ಲೂಕು ಪಂಚಾಯ್ತಿ ಸದಸ್ಯರ ಮೇಲೆ ಆರೋಪ ಮಾಡಿದ್ದು, ಐದಾರು ವಾಹನಗಳಲ್ಲಿ ಆಯುಧಗಳೊಂದಿಗೆ ಹಣ ಹಂಚಿಕೆಮಾಡಿದ್ದಾರೆ. ಚಿತ್ತಾಪುರ ತಾಲ್ಲುಕು ಪಂಚಾಯ್ತಿ ಸದಸ್ಯ ನಾಮದೇವ್ ರಾಠೋಡ್ ಮೇಲೆ ಆರೋಪ ಹಣ ಹಂಚಿದ್ದಾರೆ ಎಂದು ದೂರಿದ್ದಾರೆ.

ಹಣ ಹಂಚುವ ಗಾಡಿಯ ಮೇಲೆ ಬಿಜೆಪಿಯವರಿಂದ ಕಲ್ಲು ತೂರಾಟ ನಡೆದಿದೆ. ಹಣ ಹಂಚಿಕೆಯಲ್ಲಿ ಪ್ರಿಯಾಂಕ್ ಖರ್ಗೆಯ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ಮಧು ಮಗನಿಂದ ಮತದಾನ 
ಇಂದು ವಿವಾಹವಾದ ವೀರಭದ್ರಪ್ಪ ಮತ್ತು ಸ್ವಪ್ನ ಚಿಮ್ಮಾಇದಲಾಯಿ ಗ್ರಾಮದಲ್ಲಿ ‌ಮತ ದಾನ ಮಾಡಿದರು.

ಮದುವೆಯಾದ ಬಳಿಕ ನೇರ ಮತಗಟ್ಟೆಗೆ ‌ದಂಪತಿ ಬಂದರು. ವರ ಮಾತ್ರ ಮತದಾನ ಮಾಡಿದರು. ವಧು ಸ್ವಪ್ನ ಸೇಡಂ ತಾಲೂಕಿನ ಹೆಡಗಾ ಗ್ರಾಮದವರು. 

ಚಿಮ್ಮಾಇದಲಾಯಿ ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.

ಕುಂದಗೋಳ: ಮಧ್ಯಾಹ್ನ 3ರವರೆಗೆ ಶೇ 59.50ರಷ್ಟು ಮತದಾನ

ಕುಂದಗೋಳ ವಿಧಾನಸಭಾ ಉಪಚುನಾವಣೆ ಮಧ್ಯಾಹ್ನ  3ಗಂಟೆಯವರೆಗೆ ಶೇ 59.50ರಷ್ಟು  ಮತದಾನವಾಗಿದೆ.

54944 ಪುರುಷರು ಮತ್ತು 57779 ಮಹಿಳೆಯರು ಸೇರಿ 1,12,724 ಒಟ್ಟು  ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !