ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಫೇಸ್ ವಿದ್ಯುತ್ ಕೊರತೆ: ಸಂಕಷ್ಟದಲ್ಲಿ ಕಲ್ಲಂಗಡಿ ಬೆಳೆಗಾರರು

Last Updated 20 ಏಪ್ರಿಲ್ 2022, 6:46 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ತ್ರಿ ಫೇಸ್ ವಿದ್ಯುತ್ ಪದೇ ಪದೇ ಕೈ ಕೊಡುತ್ತಿರುವುದರಿಂದ ಕಲ್ಲಂಗಡಿ ಬೆಳೆಗಾರರಿಗೆ ತೊಂದರೆಯಾಗಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಣ್ಣಿನ ಬೇಸಾಯದಲ್ಲಿ ತೊಡಗಿದ ರೈತ ಉದಯಕುಮಾರ ಗುತ್ತೇದಾರ ಅವರ ತೋಟದಲ್ಲಿನ ಕಲ್ಲಂಗಡಿ ಬೆಳೆ ನೀರಿಲ್ಲದೇ ಬಾಡಿದೆ.

ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ ತ್ರಿಫೇಸ್ ವಿದ್ಯುತ್ ಇಲ್ಲದ್ದರಿಂದ ನೀರು ಮೇಲೆತ್ತಲು ಆಗುತ್ತಿಲ್ಲ. ಹೀಗಾಗಿ ನಮ್ಮ 4 ಎಕರೆ ಕಲ್ಲಂಗಡಿ ಬೆಳೆ ಬಾಡಿದೆ. ಜೆಸ್ಕಾಂ ಅಧಿಕಾರಿಗಳಿಗೆ ಮತ್ತು ಮಾರ್ಗದಾಳುಗಳಿಗೆ (ಲೈನ್‌ಮೆನ್‌) ಹೇಳಿದರೂ ಕೇಳುವವರೇ ಇಲ್ಲದಂತಾಗಿದೆ ಎಂದು ರೈತ ಉದಯಕುಮಾರ ಪ್ರಜಾವಾಣಿ ಎದುರು ಅಲವತ್ತುಕೊಂಡಿದ್ದಾರೆ.

ಸಸಿ ನಾಟಿಮಾಡಿ 47 ದಿನಗಳಾಗಿದ್ದು ಇನ್ನೂ 12 ದಿನಗಳಲ್ಲಿ ಹಣ್ಣು ಕೊಯ್ಲಿಗೆ ಬರುತ್ತವೆ ಆದರೆ ಈ ಹಂತದಲ್ಲಿ ವಿದ್ಯುತ್ ಕಾಟ ಕೊಡುತ್ತಿರುವುದಕ್ಕೆ ರೈತರು ಸಮಸ್ಯೆಗೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT