ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸೇವಾಬಳಗದಿಂದ ಬೀಜದ ಉಂಡೆಗಳ ತಯಾರಿ

Published 28 ಮೇ 2023, 15:37 IST
Last Updated 28 ಮೇ 2023, 15:37 IST
ಅಕ್ಷರ ಗಾತ್ರ

ಕಾಳಗಿ: ಬಿಸಿಲು ನಾಡನ್ನು ಹಸಿರು ನಾಡನ್ನಾಗಿ ಪರಿವರ್ತಿಸಲು ಇಲ್ಲಿನ ನೀಲಕಂಠ ಕಾಳೇಶ್ವರ ಸೇವಾ ಬಳಗದವರು ಪರಿಸರ ದಿನಾಚರಣೆ ಅಂಗವಾಗಿ ಮತ್ತು ಪರಿಸರ ಜನಜಾಗೃತಿಗಾಗಿ ಸಣ್ಣ ಸಣ್ಣ ಬೀಜದ ಉಂಡೆಗಳನ್ನು ತಯಾರಿಸುತ್ತಿದ್ದಾರೆ.

ಯುವಕರು ಸೇರಿ ನದಿ ದಂಡೆಯ ಫಲವತ್ತಾದ ಮಣ್ಣಿಗೆ ಗೋಮೂತ್ರ ಮತ್ತು ಸಗಣಿಯನ್ನು ಬೆರೆಸಿ ಆ ಮಿಶ್ರಣಕ್ಕೆ ವಿವಿಧ ಗಿಡಮರಗಳ ಬೀಜಗಳನ್ನು ಬೆರೆಸಿ ಬೀಜದ ಉಂಡೆ ತಯಾರಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.

ಬೇವಿನ ಬೀಜ, ಹುಣಸೆ ಬೀಜ, ಹೊಂಗೆ ಮರದ ಬೀಜ, ನೆಲ್ಲೆಕಾಯಿ ಬೀಜ, ಕಕ್ಕೆ ಗಿಡದ ಬೀಜ ಹೀಗೆ ಮೊದಲಾದ ಬೀಜಗಳನ್ನು ಸೇರಿಸಿ ಉಂಡೆಗಳನ್ನು ಮಾಡಿ ಅವರು ಪರಿಸರ ದಿನಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹನುಮಂತಪ್ಪ ಕಾಂತಿ, ಬಸವರಾಜ ಸಿಂಗಶೆಟ್ಟಿ, ಸಾಯಿಬಣ್ಣಾ ಚಿಮ್ಮನಚೋಡ, ಬಾಬು ನಾಟಿಕಾರ, ನಾರಾಯಣ ಕದಂ ಸೇರಿ ಅನೇಕ ಉತ್ಸಾಹಿ ಯುವಕರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT