ಇಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಚುನಾಯಿತ ಜನಪ್ರತಿನಿಧಿಯಾಗಿದ್ದ ಪ್ರತಾಪ ಸಿಂಹ, ತನಗಿಂತ ಹೆಚ್ಚು ಕೆಲಸ ಮಾಡಿದವರು ಯಾರೂ ಇಲ್ಲ, ಸಾಂಸ್ಕೃತಿಕ ನಗರದ ರಾಯಭಾರಿ ಎಂದೆಲ್ಲ ಓಡಾಡುತ್ತಿದ್ದಾರೆ. ಆರೋಪಿಯ ಭೇಟಿಯಾದ ಬಗ್ಗೆ ತಾವೇ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಕೊಲೆಯ ಹಿಂದೆ ಇಂತಹ ಸಂಸ್ಥೆ, ಸಂಘಟನೆ ಮತ್ತು ಆಲೋಚನೆಗಳಿವೆ ಎಂಬುದನ್ನು ಆಗಾಗ ಹೇಳುತ್ತಲೇ ಬಂದಿದ್ದೇವೆ. ಇದಕ್ಕಿಂತ ಮತ್ತೊಂದು ಸಾಕ್ಷಿ ಏನಿದೆ’ ಎಂದು ಕೇಳಿದರು.