ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಣ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಸಚಿವರು, ನಾಯಕರು ಮೆಟ್ರೊ ರೈಲು, ಸೈಕಲ್ ಹಾಗೂ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಈ ಪರಿಸ್ಥಿತಿಗೆ ಯಾರು ಕಾರಣ?' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಜಿಲ್ಲೆಯ ಕಾಳಗಿ ತಾಲ್ಲೂಕಿನ ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಬಿಜೆಪಿ ನಾಯಕರು ಸಾರ್ವಜನಿಕ ಸಾರಿಗೆಗಳನ್ನು ಬಳಸಿ, ಅದರ ರೀಲ್ಸ್ ಮಾಡಿದಾಕ್ಷಣ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ನೀಗುತ್ತದೆಯೇ?' ಎಂದು ಸಚಿವರು ಪ್ರಶ್ನಿಸಿದರು.

'ಪ್ರಧಾನಿ ಮೋದಿ ಅವರು ಈತನಕ ವಿದೇಶಿ ಯಾತ್ರೆಗೆ ₹850ಕೋಟಿ ವೆಚ್ಚವಾಗಿದೆ. ಸ್ವಯಂ ಘೋಷಿತ ವಿಶ್ವಗುರುವಿನಪಟ್ಟದ ಹೊರತು ಭಾರತ ಜನತೆಗೆ ಸಿಕ್ಕಿದ್ದೇನು? ಆತ್ಮನಿರ್ಭರ ಭಾರತ ಘೋಷಣೆ ಏನಾಯಿತು? ಭಾರತ ಇಂಧನದಲ್ಲಿ ಸ್ವಾವಲಂಬಿತನ ಸಾಧಿಸಿತೇ?' ಎಂದು ಕುಟುಕಿದರು.

'ದೇಶ ಕಷ್ಟದ ಸ್ಥಿತಿಯಲ್ಲಿದ್ದಾಗ ಮೋದಿ ವಿದೇಶಕ್ಕೆ ಹೋಗುತ್ತಾರೆ. ಆರ್ಥಿಕ ಸ್ಥಿತಿಗತಿ, ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣಗಳನ್ನು ಸಂಸತ್ತಿನಲ್ಲೇ ಹೇಳಬೇಕಿತ್ತು. ಅದಕ್ಕಾಗಿ ನೆದರ್ಲ್ಯಾಂಡ್ಸ್ ಗೆ ಯಾಕೆ ಹೋಗಬೇಕಿತ್ತು?' ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.

'ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಪೆಟ್ರೋಲಿಯಂ ಉತ್ನನ್ನಗಳ ಬೆಲೆ ಏರಿಕೆ ಮಾಡಿದೆ. ಚಿನ್ನ ಖರೀದಿ ಮಾಡಬೇಡಿ ಎಂದು ಮೋದಿ ಜನರಿಗೆ ಕರೆ ಕೊಡುತ್ತಾರೆ. ನೀಟ್ ಅಕ್ರಮ ಬಗ್ಗೆ ಮೋದಿ ಯಾಕೆ ಮಾತನಾಡುವುದಿಲ್ಲ. 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇದಕ್ಕೆಯಾರು ಕಾರಣ? ಸಚಿವ ಧರ್ಮೆಂದ್ರ ಪ್ರಧಾನ್ ಅವರನ್ನು ಇನ್ನೂ ಸಚಿವರಾಗಿ ಮುಂದುವರಿಸಿದ್ದಾರೆ ಯಾಕೆ? ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.