ಕಲಬುರಗಿ: ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿಗೆ ಅಗತ್ಯವಿರುವಷ್ಟು ವಸತಿಗೃಹ ಹಾಗೂ ವಿವಿಧ ಠಾಣೆಗಳಿಗೆ ಗಸ್ತು ವಾಹನಗಳನ್ನು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮನವಿ ಸಲ್ಲಿಸಿದ್ದು, ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸರ್ಕಾರ ಪೊಲೀಸರೊಂದಿಗೆ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

ನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಬಾರಿ ಗೃಹ ಇಲಾಖೆಗೆ ಜಿಲ್ಲೆಯಲ್ಲಿ ₹ 20ರಿಂದ ₹ 25 ಕೋಟಿ ಅನುದಾನ ತೆಗೆದಿರಿಸಲಾಗಿದೆ’ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿ ಹಬ್ಬ, ಹರಿದಿನಗಳನ್ನು ಮರೆತು ಕಾನೂನು ಸುವ್ಯವಸ್ಥೆ ಕಾಯುವ ಕೆಲಸ ಮಾಡುತ್ತಾರೆ. ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಗೃಹಸಚಿವರಾಗಿದ್ದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಮಗನ ನಾಮಕರಣವಿದ್ದರೂ ಅಂದು ರಜೆ ತೆಗೆದುಕೊಳ್ಳುವ ಬದಲು ಕರ್ತವ್ಯದಲ್ಲಿದ್ದರು. ಇಂತಹ ಬದ್ಧತೆ ಪೊಲೀಸ್ ಸಿಬ್ಬಂದಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.

ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಕಟ್ಟುನಿಟ್ಟಾಗಿ ಜನರಿಗೆ ತಲುಪುಬೇಕಾದರೆ ಗೃಹ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಕಾನೂನಿನ ಸಂರಕ್ಷಣೆಯೇ ಮೂಲಮಂತ್ರವಾಗಿಸಿಕೊಂಡಿರುವ ಪೊಲೀಸರ ಬಳಿಗೆ ಸಾರ್ವಜನಿಕರು ಬರುವುದಕ್ಕೆ ಇದು ಕಾರಣವಾಗಿದೆ. ಹಾಗಾಗಿ,ನಾನು ಪೊಲೀಸರ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕ ಅಲ್ಲಮಪ್ರಭು ಮಾತನಾಡಿ, ‘ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿಗೆ ಆಸ್ಪತ್ರೆಯಲ್ಲಿ ಮಗುವಿನ ಅಪಹರಣವಾದ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಮಗುವನ್ನು ಕಾಪಾಡುವುದರ ಜೊತೆಗೆ ಆರೋಪಿಗಳನ್ನು ಬಂಧಿಸಿರುವುದು ರಾಜ್ಯವ್ಯಾಪಿ ಪ್ರಶಂಸೆಗೆ ಕಾರಣವಾಗಿದೆ’ ಎಂದು ಹೇಳಿದರು.

ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ಪೊಲೀಸ್ ತಂಡಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಪುರುಷ ಹಾಗೂ ಮಹಿಳಾ ಅಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿದರು. ಹೆಚ್ಚುವರಿ ಎಸ್ಪಿ ಎನ್.ಶ್ರೀನಿಧಿ ವಂದನಾರ್ಪಣೆ ಸಲ್ಲಿಸಿದರು.

ಶಾಸಕರಾದ ಎಂ.ವೈ. ಪಾಟೀಲ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಸಾಬಣ್ಣ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಜರ್ ಆಲಂ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಎಎಸ್ಪಿ ಬಿಂದುಮಣಿ, ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಸಂಗಮನಾಥ ಹಿರೇಮಠ ಸೇರಿದಂತೆ ಇನ್ಸ್ಪೆಕ್ಟರ್ಗಳು, ಪಿಎಸ್ಐ, ಎಎಸ್ಐ ಹಾಗೂ ಕಾನ್ಸ್ಟೆಬಲ್ಗಳು ಭಾಗವಹಿಸಿದ್ದರು.

ಕ್ರೀಡಾಕೂಟದ ಫಲಿತಾಂಶ

ಕಬಡ್ಡಿ: ಡಿಎಆರ್ (ಪ್ರಥಮ ಸ್ಥಾನ) ಚಿಂಚೋಳಿ ಉಪ ವಿಭಾಗ (ದ್ವಿತೀಯ ಸ್ಥಾನ); ವಾಲಿಬಾಲ್: ಡಿಎಆರ್ (ಪ್ರಥಮ) ಗ್ರಾಮೀಣ ಉಪ ವಿಭಾಗ (ದ್ವಿತೀಯ); ಟಗ್ ಆಫ್ ವಾರ್: ಡಿಎಆರ್ (ಪ್ರಥಮ) ಗ್ರಾಮೀಣ ಉಪ ವಿಭಾಗ (ದ್ವಿತೀಯ) ಕ್ರಿಕೆಟ್: ಶಹಾಬಾದ್ ಉಪ ವಿಭಾಗ (ಪ್ರಥಮ) ಚಿಂಚೋಳಿ ಉಪ ವಿಭಾಗ (ದ್ವಿತೀಯ). 100 ಮೀಟರ್ ರನ್ನಿಂಗ್ ಪುರುಷ: ಡಿಎಆರ್ ಉದಯ ಕುಮಾರ್ (ಪ್ರಥಮ) ಅಫಜಲಪುರ ಪೊಲೀಸ್ ಸಿಎಚ್ಸಿ ಕಾಶೀನಾಥ (ದ್ವಿತೀಯ) ಡಿಎಆರ್ ಕಲಬುರಗಿಯ ಎಸಿಪಿ ಕಾಶೀನಾಥ್ (ತೃತೀಯ). ಉತ್ತಮ ಪೊಲೀಸ್ ಠಾಣೆ: ಶಹಾಬಾದ್ ಪೊಲೀಸ್ ಠಾಣೆ; ಉತ್ತಮ ವೃತ್ತ: ಚಿಂಚೋಳಿ; ಉತ್ತಮ ಉಪ ವಿಭಾಗ: ಆಳಂದ; ಉತ್ತಮ ಪೊಲೀಸ್ ವಟಿ: ಕಾಳಗಿ ಪೊಲೀಸ್ ಠಾಣೆ. ಉತ್ತಮ ಸಹಾಯಕ ತನಿಖಾಧಿಕಾರಿ: ಜೇವರ್ಗಿ ಠಾಣೆಯ ಸಿಎಚ್ಸಿ ಲಾಚಪ್ಪ; ಉತ್ತಮ ಪ್ರಕರಣ ಪತ್ತೆ: ಆಳಂದ ಪೊಲೀಸ್ ಠಾಣೆ (ಗನ್ ಶೂಟ್ ಪ್ರಕರಣ); ಸರ್ವೋತ್ತಮ ಪುರುಷ ವಿಭಾಗ: ಎಸಿಪಿ ಉದಯ ಕುಮಾರ್; ಸರ್ವೋತ್ತಮ ಮಹಿಳಾ ವಿಭಾಗ: ಮಹಿಳಾ ಪೊಲೀಸ್ ಠಾಣೆಯ ಅರ್ಚನಾ; ಸರ್ವೋತ್ತಮ ತಂಡ: ಡಿಎಆರ್ ಘಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.