ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಕ್ಕೆ ನೃಪತುಂಗ ಹೆಸರಿಡಲು ಒತ್ತಾಯ

Last Updated 18 ನವೆಂಬರ್ 2019, 15:52 IST
ಅಕ್ಷರ ಗಾತ್ರ

ಕಲಬುರ್ಗಿ: ಇದೇ 22ರಂದು ಉದ್ಘಾಟನೆಯಾಗಲಿರುವ ಇಲ್ಲಿನ ವಿಮಾನ ನಿಲ್ದಾಣಕ್ಕೆ ಅಮೋಘವರ್ಷ ನೃಪತುಂಗನ ಹೆಸರಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸರ್ವಧರ್ಮಗಳ ಸಮಾನತೆಯ ಹರಿಕಾರನಾಗಿ, ಕನ್ನಡದ ಬೆಳವಣಿಗೆಗೆ ನೀರೆರೆದು ಪ್ರೋತ್ಸಾಹಿಸಿದ ಕನ್ನಡಿಗರ ಹೆಮ್ಮೆಯ ಅರಸ ಅಮೋಘವರ್ಷ ನೃಪತುಂಗ ಕಲೆ, ಸಾಹಿತ್ಯ, ವಾಸ್ತುಶಿಲ್ಪಗಳನ್ನು ಅತಿ ಎತ್ತಿರಕ್ಕೆ ಬೆಳೆಸಿ ಪ್ರೋತ್ಸಾಹಿಸಿದ್ದಾನೆ. ಭಾಷೆಯ ಆಧಾರದ ಮೇಲೆ ಸಾಮ್ರಾಜ್ಯ ಕಟ್ಟಿ ಆಳಿದ್ದು ರಾಷ್ಟ್ರಕೂಟರು ಮಾತ್ರ. ಸೇಡಂ ತಾಲ್ಲೂಕಿನ ಮಳಖೇಡವನ್ನು ತಾಜಧಾನಿಯನ್ನಾಗಿಸಿಕೊಂಡು ನೇಪಾಳದವರೆಗೂ ಆಳಿರುವ ಅರಸ ಅಮೋಘವರ್ಷ ನೃಪತುಂಗ. ಕನ್ನಡ ಸಾಹಿತ್ಯ ಚರಿತ್ರೆಗೆ ಅಮೋಘ ಕೊಡುಗೆ ನೀಡಿದ ನೃಪತುಂಗನ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ ಒತ್ತಾಯಿಸಿದರು.

ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT