ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಣಿ

ಪ್ರಜಾವಾಣಿ ವಾರ್ತೆ
ಅಫಜಲಪುರ: ಕರ್ನಾಟಕ ಯುವ ಶಕ್ತಿ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಚಿನ್ಮಯಗಿರಿಯ ಕೆಪಿಆರ್ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕರ್ನಾಟಕ ಯುವ ಶಕ್ತಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಅವ್ವಣಗೌಡ ಎನ್. ಪಾಟೀಲ್ ಮಾತನಾಡಿ, ಕಾರ್ಖಾನೆಯಲ್ಲಿ ಶೇ 90 ಸ್ಥಳೀಯರೇ ಇರಬೇಕು. ಪ್ರತಿ ವರ್ಷ ಕಬ್ಬು ಬೆಳೆಗಾರರಿಗೆ ಕಾರ್ಖಾನೆಯಿಂದ ಬೇಕಾಗುವ ಗೊಬ್ಬರವನ್ನು ಪೂರೈಸಿ ನಂತರ ಬಿಲ್ನಲ್ಲಿ ಕಡಿತ ಮಾಡಿಕೊಳ್ಳಬೇಕು. ಸ್ಥಳೀಯ ಕಾರ್ಮಿಕರ ಸಂಬಳ, ಭತ್ಯೆ ಹೆಚ್ಚಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಯ ಸಿಬ್ಬಂದಿಗ ರೈತರಿಗೆ ಸುಳ್ಳು ಭರವಸೆ, ಅಶ್ವಾಸನೆ ಕೊಟ್ಟು ಮೋಸ, ವಂಚನೆ ಮಾಡಿದರೆ ಕೆಪಿಆರ್ ಕಾರ್ಖಾನೆ ಆಡಳಿತ ಮಂಡಳಿಯವರೇ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದರು.
ಕಾರ್ಖಾನೆ ಡಿ.ಜಿ.ಎಮ್ ರಾಜಶೇಖರನ್ ಮನವಿ ಸ್ವೀಕರಿಸಿ ಮಾತನಾಡಿ, 15 ಬೇಡಿಕೆಯಲ್ಲಿ 11 ಬೇಡಿಕೆಗಳು ನ್ಯಾಯಯುತ ಮತ್ತು ಸ್ಥಳೀಯವಾಗಿ ಇರುವುದರಿಂದ ವಾರದಲ್ಲಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಎಮ್.ಡಿ ಹನಿಫ್, ವಿಜಯಕುಮಾರ ಅರಳಗುಂಡಗಿ, ಮಹಾರಾಯ ಅಗಸಿ, ಶಿವು ಗಾಣುರ, ಪೀರಪ್ಪ ಮ್ಯಾಕೇರಿ, ಬಾಬು ಕಾಚಾಪೂರ, ಅಭಿಷೇಕ್ ತಳಕೆರಿ, ಮಲ್ಲು ಮ್ಯಾಕೇರಿ, ರಾಜು ಜಮಾದಾರ, ಗೌಡಪ್ಪಗೌಡ ಮದರಿ, ಶಶಿಧರ ಮಾಸ್ಟರ, ನರಸಪ್ಪ ದುಖಾನಧಾರ, ಸೋಮನಿಂಗ ಕಾಂಬಳೆ, ಅನ್ವರ ಮಕಂದಾರ,ಸೌದಿ ಮಕಂದಾರ,ಶಿವರಾಜ್ ಅಕಮಂಚಿ, ರಾಮು ಹರಗಿ,ಆನಂದ ಜಮಾದಾರ ಪೀರಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.