ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Last Updated 10 ಆಗಸ್ಟ್ 2021, 9:46 IST
ಅಕ್ಷರ ಗಾತ್ರ

ಕಲಬುರ್ಗಿ: ದೆಹಲಿಯ ನಂಗಲ್ ಎಂಬ ಗ್ರಾಮದಲ್ಲಿ 9 ವರ್ಷದ ಬಾಲಕಿಯ ಮೇಲೆ ದೇವಸ್ಥಾನದ ಪೂಜಾರಿ ಹಾಗೂ ಇತರ ನಾಲ್ವರು ಅತ್ಯಾಚಾರ ಮಾಡಿದ್ದನ್ನು ಖಂಡಿಸಿ ನಗರದ ವುಮೆನ್ ಇಂಡಿಯಾ ಮೂವ್‌ಮೆಂಟ್ ಸಂಘಟನೆಯ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ರೆಹನಾ ಬೇಗಂ, ‘ಏನೇನೂ ಅರಿಯದ ಮುಗ್ಧ ಕಂದಮ್ಮಗಳನ್ನು ತಮ್ಮ ಲೈಂಗಿಕತೆಗೆ ಬಳಸಿಕೊಳ್ಳುವ ಮನಸ್ಥಿತಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಅತ್ಯಾಚಾರವನ್ನು ಕೋಮು ದೃಷ್ಟಿಯಿಂದ ನೋಡುತ್ತಾ ಅತ್ಯಾಚಾರಿಗಳ ಬೆನ್ನಿಗೆ ರಾಜಕಾರಣಿಗಳು ಮತ್ತು ಸರ್ಕಾರಗಳು ನಿಲ್ಲುವುದರಿಂದ ಅತ್ಯಾಚಾರ, ಕೊಲೆಗಳು ವ್ಯಾಪಕವಾಗುತ್ತಿವೆ’ ಎಂದು ಟೀಕಿಸಿದರು.

ದ್ವೇಷ ಭಾಷಣಗಳು ಕೂಡಾ ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ಕಥುವಾ, ಉನ್ನಾವೊ, ಹಾಥರಸ್, ವಿಜಯಪುರದ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣಗಳಲ್ಲಿ ಇದನ್ನು ಗುರುತಿಸಬಹುದಾಗಿದೆ ಇತ್ತೀಚೆಗೆ ಗೋವಾ ಮುಖ್ಯಮಂತ್ರಿಯೂ ಅತ್ಯಾಚಾರಕ್ಕೆ ಪೋಷಕರನ್ನು ಹೊಣೆಯಾಗಿಸಿ ಸರ್ಕಾರದ ಜವಾಬ್ದಾರಿಯಿಂದ ನುಣುಚಿಕೊಂಡರು ಎಂದರು.

ಇಂತಹ ಪ್ರಕರಣಗಳನ್ನು ತಡೆಗಟ್ಟಲು ನಿಷ್ಪಕ್ಷಪಾತ, ತ್ವರಿತ ವಿಚಾರಣೆ, ಕಠಿಣ ಕಾನೂನು, ಅಮಲು ಪದಾರ್ಥಗಳು, ಮಾದಕ ದ್ರವ್ಯಗಳು ಹಾಗೂ ಅಶ್ಲೀಲ ಸಿನಿಮಾಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸದಿಯಾ ಸೈದಾ, ಕನೀಸ್, ಜಿಲ್ಲಾ ಕಾರ್ಯದರ್ಶಿಗಳಾದ ಸಮೀನ ಮತ್ತು ಆಜ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT