ಬುಧವಾರ, ಸೆಪ್ಟೆಂಬರ್ 30, 2020
21 °C
ನಯೆ ಸವೇರಾ ಸಂಘಟನೆಯಿಂದ ಶಾಸಕರಿಗೆ ಮನವಿ ಸಲ್ಲಿಕೆ

ವಿದ್ಯುತ್‌ ಬಿಲ್‌ ಹೆಚ್ಚಳ: ಕಡಿತ ಮಾಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಾರ್ಚ್‌ನಿಂದ ಜೂನ್‌ವರೆಗೆ ಎರಡರಿಂದ ಮುರು ಪಟ್ಟು ವಿದ್ಯುತ್ ಬಿಲ್‌ ಹೆಚ್ಚಿಗೆ ಬಂದಿದ್ದು, ಅವುಗಳನ್ನು ಸರಿಪಡಿಸಿ ಬಿಲ್ ಮೊತ್ತವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ನಯೆ ಸವೆರ ಸಂಘಟನೆ ಕಾರ್ಯಕರ್ತರು ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಕನೀಜ್ ಫಾತಿಮಾ ಅವರಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು. ಆದರೆ ಸರ್ಕಾರ ಮತ್ತು ಜೆಸ್ಕಾಂ ಅಧಿಕಾರಿಗಳು ಇದಕ್ಕೆ ಸ್ಪಂದನೆ ಮಾಡಲಿಲ್ಲ ಎಂದರು.

ಸಂಘಟನೆ ಅಧ್ಯಕ್ಷ ಮೋದಿನ ಪಟೇಲ್ ಅಣಬಿ, ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಚಿತ್ತಾಪುರ, ಸೈಯದ್ ಏಜಾಜ್ ಅಲಿ ಇನಾಮದಾರ, ಸಾಯಿರಾ ಬಾನು, ಅಬ್ದುಲ್ ವಾಹಿದ್, ಮಲ್ಲಿಕಾರ್ಜುನ ನೀಲೂರ, ಖಾಲಿಕ್ ಅಹ್ಮದ್, ಮಕ್ಬುಲ್ ಅಹಮದ್ ಸಗರಿ, ಫಯಾಜ್ ಪಟೇಲ್, ಗೀತಾ ಮುದಗಲ್, ರಾಬಿಯಾ ಶಿಕಾರಿ, ರಾಫಿಯ ಸೀರಿನ್, ಫೌಜಿಯಾ ಬೇಗಂ, ಪರ್ವೀನ್ ಬೇಗಂ, ಮುಮ್ತಾಜ್ ಬೇಗಂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು