ಆಳಂದ: ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕೋಲಿ ಸಮಾಜದ ಗೌರವಾಧ್ಯಕ್ಷ ವಿಶ್ವನಾಥ ಜಮಾದಾರ ಹತ್ಯೆ ಖಂಡಿಸಿ ಶನಿವಾರ ಆಳಂದ ಪಟ್ಟಣದಲ್ಲಿ ಸಮಾಜ ಬಾಂಧವರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಆಳಂದ ಪಟ್ಟಣದ ಹಳೆಯ ಚೆಕ್ಪೋಸ್ಟ್ ಬಳಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿ ಮುಖ್ಯರಸ್ತೆ ಮೇಲೆ ಧರಣಿ ಕೈಗೊಳ್ಳಲಾಯಿತು. ಇದರಿಂದ ಆಳಂದ- ಕಲಬುರಗಿ, ಆಳಂದ- ಸೋಲಾಪುರ ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡಿತು.

ಕೋಲಿ-ಕಬ್ಬಲಿಗ ಸಮಾಜದ ಜಿಲ್ಲಾ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ‘ಗ್ರಾ.ಪಂ. ಮಾಜಿ ಸದಸ್ಯ ವಿಶ್ವನಾಥ ಜಮಾದಾರ ಹತ್ಯೆಯ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಯಜಮಾನನ್ನು ಕಳೆದುಕೊಂಡು ಬಡಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ‘ವಿಶ್ವನಾಥ ಜಮಾದಾರ ಕುಟುಂಬವು ಘಟನೆಯಿಂದ ಭಯಭೀತವಾಗಿದೆ. ಕುಟುಂಬಕ್ಕೆ ರಕ್ಷಣೆ ನೀಡಬೇಕು. ಅಸಹಾಯಕ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ವಿಶ್ವನಾಥ ಜಮದಾರ ಹತ್ಯೆ ಖಂಡಿಸಿ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಕೋಲಿ ಸಮಾಜದ ತಾಲ್ಲೂಕಾಧ್ಯಕ್ಷ ಶಿವಲಿಂಗಪ್ಪ ಜಮಾದಾರ, ಮಾಜಿ ಅಧ್ಯಕ್ಷ ಅಂಬಾರಾಯ ಚಿತಲಿ, ಕಲ್ಯಾಣಿ ಜಮಾದಾರ, ಶರಣಪ್ಪ ನಾಟೀಕರ, ಸೀತಾರಾಮ ಜಮಾದಾರ, ನಾಮದೇವ ಶಕಾಪುರೆ, ಶರಣಬಸಪ್ಪ ಕಣಮಸ, ಸಾತಪ್ಪ ಕೂರನೆ, ಸಿದ್ದರಾಮ ತಳವಾರ, ಮಹಾದೇವ ಜಮಾದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.