ಸೋಮವಾರ, ಜನವರಿ 20, 2020
29 °C

ಸೆಕ್ಷನ್ 144 ಹಿಂಪಡೆಯಲು ಆಗ್ರಹಿಸಿ ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಪೌರತ್ವ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ಹಿನ್ನೆಲೆಯಲ್ಲಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದ್ದನ್ನು ಹಿಂದಕ್ಕೆ ಪಡೆಯುವಂತೆ ಮತ್ತು‌ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ‌ನಡೆಸಿದರು.

ನಿಷೇಧಾಜ್ಞೆ ಜಾರಿಗೊಳಿಸಿ ಕಮಿಷನರ್ ಎಂ.ಎನ್. ನಾಗರಾಜ ಆದೇಶ ಹೊರಡಿಸಿದ್ದಾರೆ. 

ಮುಖಂಡರಾದ ಮಾರುತಿ ಮಾನ್ಪಡೆ, ಮಹ್ಮದ್ ಅಸಗರ ಚುಲ್ ಬುಲ್, ಉಸ್ತಾದ್ ನಾಸೀರ ಹುಸೇನ್, ವಾಹಜ್ ಬಾಬಾ, ಯು ಬಸವರಾಜು  ಇನ್ನಿತರರು ಆಯುಕ್ತಾಲಯದ ಮೆಟ್ಟಿಲು ಮೇಲೆ‌ ಕುಳಿತುಕೊಂಡು ಆದೇಶ ಹಿಂಪಡೆಯಲು ಆಗ್ರಹಿಸಿದರು.

ಪೊಲೀಸರು ತಡೆಯಲು ಯತ್ನಿಸಿದರೂ ಘೋಷಣೆ ಕೂಗಲು ಆರಂಭಿಸಿದರು.  ಪ್ರತಿಭಟನೆಗೆ ಮಣಿದ ನಾಗರಾಜ, ಡಿಸಿಪಿ ಕಿಶೋರ್ ಬಾಬು ಇತರರು ಪ್ರತಿಭಟನಾನಿರತರ ಜತೆ ಮಾತಕತೆ ನಡೆಸಿದರು. 

144 ಸೆಕ್ಷನ್ ಹಿಂದಕ್ಕೆ ಪಡೆಯುವವರೆಗೂ ನಿಮ್ಮೊಂದಿಗೆ ಮಾತನಾಡಲ್ಲ ಎಂದು ಮಾನ್ಪಡೆ ಇತರರು ಪಟ್ಟು ಹಿಡಿದರು. ಅಧಿಕಾರಿಗಳು ಸಮಾಧಾನ ಮಾಡಿ ಕಚೇರಿಯೊಳಗೆ ಕರೆದುಕೊಂಡು ಹೋದರು. ಸಮಾರು ಹೊತ್ತು ಮಾತುಕತೆ ನಡೆಸಿದರು. ಪೊಲೀಸರು ನಿಷೇಧಾಜ್ಞೆ ವಿಧಿಸಲು ಕಾರಣ ತಿಳಿಸಿದರು.

ಮಾತುಕತೆ ವೇಳೆಯಲ್ಲಿ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಇಲಿಯಾಸ್ ಬಾಗವಾನ, ಮಾಜಿ‌ ಮೇಯರ್ ಸೈಯದ್ ಅಹ್ಮದ್ ಇದ್ದರು.

ಪೌರತ್ವ ತಿದ್ದುಪಡಿ ‌ಮಸೂದೆ ವಿರೋಧಿಸಿ ದೇಶದ ಅನೇಕ ಕಡೆ ಗುರುವಾರ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು