ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಟಗಾ (ಕೆ): ಸ್ಮಶಾನ ಭೂಮಿ ಸ್ಥಳಾಂತರಿಸಲು ಆಗ್ರಹ

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ
Published : 3 ಆಗಸ್ಟ್ 2024, 15:35 IST
Last Updated : 3 ಆಗಸ್ಟ್ 2024, 15:35 IST
ಫಾಲೋ ಮಾಡಿ
Comments

ಕಲಬುರಗಿ: ತಾಲ್ಲೂಕಿನ ಇಟಗಾ (ಕೆ) ಗ್ರಾಮದಲ್ಲಿರುವ ತಾಂಡಾದ ರೈತರು ಸುಮಾರು 70 ವರ್ಷಗಳಿಂದಲೂ ಸರ್ವೆ ನಂ 42ರಲ್ಲಿನ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ, ಗ್ರಾಮಸ್ಥರಿಗೆ ತಿಳಿಯದಂತೆ ಈ ಜಮೀನಿನ ನಾಲ್ಕು ಎಕರೆಯನ್ನು ಸ್ಮಶಾನಕ್ಕೆ ಗೊತ್ತು ಮಾಡಲಾಗಿದೆ. ಅದನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆ ನೇತೃತ್ವದಲ್ಲಿ ಸಾಗುವಳಿದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರಸಕ್ತ ಸಮಯದವರೆಗೂ ಗ್ರಾಮಸ್ಥರು ಆ ಜಮೀನಿನಲ್ಲಿ ಸಾಗುವಳಿ ನಡೆಸುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಯಾವುದೇ ರೀತಿಯ ಮಾಹಿತಿಯಾಗಲಿ, ಸೂಚನೆಗಳಾಗಲಿ ಅಥವಾ ರೈತರ ಒಪ್ಪಿಗೆ ಪಡೆದಿರುವುದಾಗಿರಲಿ ಯಾವ ಪ್ರಕ್ರಿಯೆಯೂ ಇಲ್ಲಿ ನಡೆದಿಲ್ಲ. ಇಲ್ಲಿಯವರೆಗೂ ಆ ಜಮೀನಿನಲ್ಲಿ ಸಾಗುವಳಿ ನಡೆಯುತ್ತಿರುವುದರಿಂದ ಕೃಷಿ ಯೋಗ್ಯಭೂಮಿಯನ್ನು ಹೊರತುಪಡಿಸಿ ಅನುಪಯುಕ್ತ ಭೂಮಿಯಲ್ಲಿ ಸ್ಮಶಾನಕ್ಕೆ ವ್ಯವಸ್ಥೆ ಮಾಡಿ ಪ್ರಸಕ್ತ ಭೂಮಿಯನ್ನು ರೈತರಿಗೆ ಸಾಗುವಳಿ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. 

ಬಗರ್ ಹುಕುಂ ಭೂಮಿಯ ಹಕ್ಕಿಗಾಗಿ ಗ್ರಾಮದ ಜನರು ಸಲ್ಲಿಸಿರುವ ಫಾರ್ಮ್ ನಂ. 57 ಅರ್ಜಿಯನ್ನು ಕೂಡಲೇ ಪರಿಶೀಲಿಸಿ, ಸೂಕ್ತ ಸರ್ವೆಗಳನ್ನು ನಡೆಸಿ 70 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರವನ್ನು ನೀಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು. 

ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ., ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಸಿಂಗೆ, ಇಟಗಾ (ಕೆ) ತಾಂಡಾ ಸಮಿತಿ ಅಧ್ಯಕ್ಷ ಶಿವರಾಮ ರಾಠೋಡ್, ಕಾರ್ಯದರ್ಶಿ ಪಾಂಡು ರಾಥೋಡ, ಸದಸ್ಯರಾದ ಭೀಮಾಶಂಕರ ಆಂದೋಲಾ, ಅಮೃತ್ ಚವ್ಹಾಣ್, ಗುಂಡು ಬಾಬು ಚವಾಣ್, ಶಿವರಾಂ ರಾಠೋಡ್, ರಾಜು ರಾಠೋಡ್, ಶಾಂತಾಬಾಯಿ ರಾಠೋಡ್, ರವಿ ರಾಠೋಡ್, ಸಂತೋಷ್ ರಾಠೋಡ್, ಶಿವಕುಮಾರ್ ರಾಠೋಡ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT