ಬ್ಯಾಂಕ್ ಖಾತೆ; ಪರವಾನಗಿಗೆ ಆಗ್ರಹಿಸಿ ಪ್ರತಿಭಟನೆ

7

ಬ್ಯಾಂಕ್ ಖಾತೆ; ಪರವಾನಗಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಕಲಬುರ್ಗಿ: ಚಿಂಚೋಳಿ ತಾಲ್ಲೂಕು ಕೋಡ್ಲಿಯಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ (ಪಿಕೆಜಿಬಿ)ನಲ್ಲಿ ಸಾರ್ವಜನಿಕರಿಗೆ ಖಾತೆ ತೆರೆಯಲು ಪರವಾನಗಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ಲೀಡ್ ಬ್ಯಾಂಕ್ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.

ಚಿಂಚೋಳಿ ತಾಲ್ಲೂಕಿನ ತೇಗಲತಿಪ್ಪಿ, ಹಲಚೇರಾ, ಹೊಸಳ್ಳಿ (ಎಚ್), ಕುಡಳ್ಳಿ, ವಜ್ಜರಗಾಂವ, ನಾವದಗಿ ಮತ್ತು ಚಿಂತಕುಂಟಾ ಗ್ರಾಮಗಳ ಜನರಿಗೆ ಈ ಮೊದಲಿನಂತೆ ಬ್ಯಾಂಕ್ ಖಾತೆ ತೆರೆಯಲು ಪರವಾನಗಿ ನೀಡಬೇಕು. ತೊಗರಿ ಮಾರಾಟ ಮಾಡಿದ ಹಣ ರೈತರ ಖಾತೆಗೆ ಜಮೆಯಾದರೂ ಬ್ಯಾಂಕ್‌ನವರು ರೈತರಿಗೆ ಪಾವತಿಸುತ್ತಿಲ್ಲ. ಆದ್ದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರಿಗೆ ಸರಳ ರೀತಿಯಲ್ಲಿ ಸಾಲ ಕೊಡಬೇಕು. ಚಿಂಚೋಳಿಯ ಸ್ಟೇಟ್ ಬ್ಯಾಂಕ್ ಹೈದರಾಬಾದ್ ಶಾಖೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಮಂಜೂರು ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳು ಮತ್ತು ಹೈನುಗಾರಿಕೆ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಯಿಂದ ರೈತರಿಗೆ ಪಾವತಿಸಬೇಕು. ಹೋಬಳಿ ಮಟ್ಟದಲ್ಲಿನ ಬ್ಯಾಂಕುಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಕೆಪಿಆರ್‌ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಮುಖಂಡರಾದ ಗುರು ಕೋಣಿನ್, ಶರಣಗೌಡ ಪೊಲೀಸ್ ಪಾಟೀಲ, ಪರಮೇಶ್ವರ ಕಾಂತಾ, ಸಂತೋಷ ಮಾಳಗಿ, ನರಸಯ್ಯ ಗುತ್ತೇದಾರ, ಶಬ್ಬೀರಮಿಯ್ಯಾ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !