ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಕಲಬುರ್ಗಿ: ಗ್ರಾ.ಪಂ ಅವ್ಯವಹಾರ, ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್‌ ಗ್ರಾಮ ಪಂಚಾಯಿತಿಯ 14 ‌ಮತ್ತು 15ನೇ ಹಣಕಾಸಿನಲ್ಲಿ ಸುಮಾರು ₹ 55 ಲಕ್ಷ ದುರುಪಯೋಗವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ, ಮಲ್ಲಾಬಾದ್‌ ಗ್ರಾಮ ಪಂಚಾಯಿತಿ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ಸದಸ್ಯರು, ‘ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ‌ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.‌

‘ಸದರಿ ಕ್ರಿಯಾ ಯೋಜನೆ ಕುರಿತು ಸದಸ್ಯರು ಜೊತೆಗೂಡಿ ಅಧ್ಯಕ್ಷ ಹಾಗೂ ಪಿಡಿಒ ಅವರನ್ನು ವಿಚಾರಿಸಿದರೂ ಸರಿಯಾದ ಉತ್ತರ ನೀಡುತ್ತಿಲ್ಲ. ಲೆಕ್ಕವನ್ನೂ ಕೊಡುತ್ತಿಲ್ಲ. ಈಗಾಗಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬೀಳಲಿದೆ’ ಎಂದೂ ಹೇಳಿದರು.

ಸದಸ್ಯರಾದ ಶ್ರೀಶೈಲ ಶಾಮರಾವ್‌, ಸಿದ್ದು ಜಮಾದಾರ, ಅನಿತಾ ದೊಡ್ಡಮನಿ, ಭಾಗಮ್ಮ‌ ಕೊಳ್ಳಿ, ಶ್ರೀದೇವಿ ಅಡಕಿ,ಕಲ್ಯಾಣಿ ಕುಂಬಾರತೋಟ, ಲಕ್ಷ್ಮಿ ಜಮಾದಾರ, ಭಾಗಮ್ಮ‌ ದೊಡ್ಡಮನಿ, ಲಕ್ಷ್ಮಿಬಾಯಿ ಬಡದಾಳ, ಮಂಜುಳಾ ಮೋರೆ, ಭಾಗ್ಯಶ್ರೀ ಬಗಲಿ ಹಾಗೂ ಡಿ.ಎಸ್.ಎಸ್. ಜಿಲ್ಲಾ ಘಟಕದ ಅಧ್ಯಕ್ಷ ಸಂಗಮನಾಥ ಬಟಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.