ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಧ್ವಂಸ: 13ರಂದು ಪ್ರತಿಭಟನೆ’

Last Updated 10 ಆಗಸ್ಟ್ 2021, 16:14 IST
ಅಕ್ಷರ ಗಾತ್ರ

ಕಲಬುರ್ಗಿ: ‘ತಾಲ್ಲೂಕಿನ ಭೂಪಾಲತೆಗನೂರಿನ ಸಾತಪ್ಪ ರಾಣಪ್ಪ ಎನ್ನುವವರಿಗೆ ಸೇರಿದ ಮನೆಯನ್ನು ಅಧಿಕಾರಿಗಳು ಅಕ್ರಮ ಎಂದು ಭಾವಿಸಿ ಧ್ವಂಸಗಳಿಸಿದ್ದು, ಇದನ್ನು ಖಂಡಿಸಿ ಆ. 13ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ರಾಜ್ಯ ಘಟಕದ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಹೇಳಿದರು.

‘ಭೂಪಾಲತೆಗನೂರ ಗ್ರಾಮದಲ್ಲಿ 5 ಎಕರೆ 7 ಗುಂಟೆ ಸರ್ಕಾರಿ ಜಮೀನಿದೆ. ಇದರಲ್ಲಿ ಈಗಾಗಲೇ ಸರ್ಕಾರಿ ಶಾಲೆ ನಿರ್ಮಿಸಲಾಗಿದೆ. ಅದರೊಂದಿಗೆ 18 ವರ್ಷಗಳ ಹಿಂದೆ ಸಾತಪ್ಪ ಅವರು ಮನೆ ಕಟ್ಟಿಕೊಂಡಿದ್ದಾರೆ. ಅಕ್ರಮ– ಸಕ್ರಮ ಅಡಿ ಅದನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ಪರಿಶಿಷ್ಟ ಸಮುದಾಯದವರಾದ ಸಾತಪ್ಪ ಅವರಿಗೆ ಯೋಜನೆಯ ಲಾಭ ನೀಡುವ ಬದಲು ಅಧಿಕಾರಿಗಳು ಏಕಾಏಕಿ ಬುಲ್ಡೋಜರ್‌ನಿಂದ ಮನೆ ಧ್ವಂಸ ಮಾಡಿದ್ದಾರೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಕ್ಕೂಟದ ಮುಖಂಡರಾದ ಮರಿತಪ್ಪ ಹಳ್ಳಿ, ಅರ್ಜುನ ಗೊಬ್ಬೂರ, ಮಹಾದೇವ ಕೋಳಕೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT