ಗುರುವಾರ, 25 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ‘ಕುಲಾಂತರಿ ತಳಿ’ ಉತ್ತೇಜನಕ್ಕೆ ಒತ್ತು: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ

Last Updated 28 ಏಪ್ರಿಲ್ 2018, 14:19 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ‘ಕುಲಾಂತರಿ ತಳಿ’ ಉತ್ತೇಜನಕ್ಕೆ ಒತ್ತು ನೀಡಿರುವುದಕ್ಕೆ ಕೃಷಿಕರ ಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವ ಜೈರಾಂ ರಮೇಶ್ ಬಿ.ಟಿ.ಬದನೆ ಮತ್ತು ಕುಲಾಂತರಿ ತಳಿಗಳ ನಿಷೇಧಕ್ಕೆ ಒತ್ತು ನೀಡಿದ್ದನ್ನು ಪ್ರಸ್ತಾಪಿಸಿ, ಕೆಲವರು ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವರು ‘ನೋ ಜಿಎಂಒ ನೋ ಕಾಂಗ್ರೆಸ್’ ಎಂಬ ಸಾಲುಗಳನ್ನು ಹಾಕುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

‘ಬಿಟಿ ಬದನೆ ಮತ್ತು ಕುಲಾಂತರಿ ತಳಿಗಳ ನಿಷೇಧದ ದಿಟ್ಟತನ ತೋರಿದ್ದ, ಸಿರಿಧಾನ್ಯಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ, ಸಾವಯವ ಕೃಷಿಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದ ಕಾಂಗ್ರೆಸ್, ಈಗ ತಾನು ಅಧಿಕಾರಕ್ಕೆ ಬಂದರೆ ಕುಲಾಂತರಿ ತಳಿಗಳನ್ನು ಪರಿಚಯಿಸುತ್ತೇನೆ’ ಎಂದು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಮೊದಲು ಪ್ರಣಾಳಿಕೆಯಿಂದ ಈ ಸಾಲುಗಳನ್ನು ತೆಗೆಯಬೇಕು. ಕರ್ನಾಟಕ್ಕೆ ಕುಲಾಂತರಿ ತಳಿ ಬಿಟ್ಟುಕೊಳ್ಳುವುದಿಲ್ಲ ಎಂದು ಘೋಷಿಸಬೇಕು’ ಎಂದು ಸಹಜ ಸಮೃದ್ಧ ಸಂಘಟನೆಯ ಜಿ.ಕೃಷ್ಣಪ್ರಸಾದ್ ಒತ್ತಾಯಿಸಿದ್ದಾರೆ.

‘ಪ್ರಣಾಳಿಕೆಯಲ್ಲಿ ಕುಲಾಂತರಿ ತಳಿ ಪ್ರೋತ್ಸಾಹಿಸಿರುವುದು ಆಘಾತಕಾರಿ ವಿಷಯ. ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವ ಜೈರಾಂ ರಮೇಶ್ ಕುಲಾಂತರಿ ತಳಿಗಳು ನಮ್ಮ ಹೊಲಗಳಿಗೆ ಕಾಲಿಡುವುದನ್ನು ಸಂಪೂರ್ಣ ವಿರೋಧಿಸಿ ಕಡಿವಾಣ ಹಾಕಿದ್ದರು. ಈಗ ಚುನಾವಣೆಯಲ್ಲಿ ಆ ವಿಷಯವನ್ನು ಪ್ರಸ್ಥಾಪವಾಗಿರುವುದು ಆಶ್ಚರ್ಯ ತಂದಿದೆ. ಕೂಡಲೇ ಪ್ರಣಾಳಿಕೆಯಿಂದ ಈ ಅಂಶವನ್ನು ಕೈಬಿಡಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲೆಯ ಸಾವಯವ, ಸುಸ್ಥಿರ ಹಾಗೂ ಸಿರಿಧಾನ್ಯ ಕೃಷಿಕರ ಮತ್ತು ಕೃಷಿ ಸಂಘಟನೆಗಳ ಪರವಾಗಿ ಆಗ್ರಹಿಸುತ್ತಿರುವುದಾಗಿ’ ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಪೋಸ್ಟ್ ಮಾಡಿದ್ದಾರೆ.

‘ಒಂದು ಕಡೆ ಕುಲಾಂತರಿ ಬೀಜದ ಸುಧಾರಣೆ ಕೈಗೊಳ್ಳುತ್ತೇವೆ ಎನ್ನುವ ಕಾಂಗ್ರೆಸ್ ಮತ್ತೊಂದು ಕಡೆ ಸಾವಯವ ಕೃಷಿಗಾಗಿಯೇ ಹೊಸ ಇಲಾಖೆ ಪ್ರಾರಂಭಿಸುತ್ತೇವೆ’ ಎನ್ನುತ್ತದೆ. ಬಂಡವಾಳ ಶಾಹಿಗಳನ್ನೂ ಸಂತೋಷ ಪಡಿಸಬೇಕು. ರೈತರನ್ನು ಸಂತೋಷಗೊಳಿಸುವ ಕೆಲಸಕ್ಕೆ ಮುಂದಾಗಿದೆ. ಇವರ ಮಾತನ್ನು ಜನ ನಂಬಬಾರದು’ ಎಂದು ಮೇಲುಕೋಟೆಯ ಜನಪದ ಸೇವಾಟ್ರಸ್ಟ್‌ನ ಸಂತೋಷ್ ಕೌಲಗಿ ಫೇಸ್‌ಬುಕ್ ಮೂಲಕ ಒತ್ತಾಯಿಸಿದ್ದಾರೆ.

ಈ ಪೋಸ್ಟ್‌ಗಳಿಗೆ ಕೆಲವರು ‘ಚುನಾವಣೆ ವೇಳೆ ಇವೆಲ್ಲ ಸಹಜ. ಇಂಥ ಪ್ರಣಾಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯಗಳು ವ್ಯಕ್ತಪಡಿಸಿದ್ದಾರೆ.

ಇದು ಮೊಯಿಲಿ ಅವರ ಮೂರ್ಖತನದಿಂದ ಆಯಿತೇ? ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆಯೇ ನುಸುಳಿವೆಯೇ? ಸಾವಯವ ಕೃಷಿ ಮೇಳ ಮಾಡಿ ಪ್ರಚಾರ ಮಾಡುತ್ತಾರೆ. ಈಗ ಬಿಟಿ ಏಕೆ ಬೇಕಿತ್ತು? ಎಂದು ಕೆಲವರು ‍ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಣಾಳಿಕೆ ಓದಿ ವಿಮರ್ಶಿಸುವುದಕ್ಕೆ ಅಲ್ಲವೇ ಅಲ್ಲ. ‘ಅವು ಕಾರ್ಯಕರ್ತರು ಸಂಜೆ ಬಾರ್‌ನಲ್ಲಿ ಎಣ್ಣೆ ಹೊಡೆದು ಬೋಂಡ, ಪಕೋಡ ತಿಂದ ಮೇಲೆ ಕೈ ಒರೆಸಿಕೊಳ್ಳುದಕ್ಕೆ ಪ್ರಕಟಿಸಿರುವುದು. ನೀರಿಲ್ಲದ ಜಾಗದಲ್ಲಿ ಟಿಸ್ಯೂ ಪೇಪರ್ ಆಗಿ ಕೂಡ ಬಳಸಬಹುದು.’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಪ್ರಣಾಳಿಕೆಗಳನ್ನು ಅಲಕ್ಷ್ಯಿಸುವುದೇ ಸೂಕ್ತ ಎಂಬ ಸಲಹೆಗಳೂ ಪ್ರಕಟಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT