ಗುರುವಾರ , ನವೆಂಬರ್ 14, 2019
18 °C
‘ವಾಣಿಜ್ಯ ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ಇಲ್ಲ’

ಪದವಿ ಕಾಲೇಜು ಮಟ್ಟದ ವಾಣಿಜ್ಯೋತ್ಸವ

Published:
Updated:
Prajavani

ಆಳಂದ: ‘ಜಾಗತೀಕರಣದಿಂದಾಗಿ ಈಗ ವಾಣಿಜ್ಯ ಪದವೀಧರರಿಗೆ ದೇಶ, ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶಗಳು ಇವೆ’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.

ಪಟ್ಟಣದ ಸಂಬುದ್ಧ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಸೋಮವಾರ ಏರ್ಪಡಿಸಿದ ಅಂತರ ಕಾಲೇಜುಗಳ ‘ವಾಣಿಜ್ಯೋತ್ಸವ‘ದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪದಕ ವಿತರಿಸಿ ಅವರು ಮಾತನಾಡಿದರು.

‘ಇಂದು ಜಿಎಸ್‌ಟಿ, ವಿಮೆ, ತೆರಿಗೆ ಸೇರಿದಂತೆ ಆರ್ಥಿಕ ವ್ಯವಹಾರಗಳನ್ನು ಸುವ್ಯವಸ್ಥೆಗೊಳಿಸಲು ವಾಣಿಜ್ಯ ಜ್ಞಾನ ಅವಶ್ಯಕವಾಗಿದೆ’ ಎಂದರು.

ಚಿತ್ರದುರ್ಗದ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ವಿಶ್ವರಾಜ ಅಲ್ಲೂರು ಮಾತನಾಡಿ,‘ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಅಧ್ಯಯನದಿಂದ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಲು ಸಾಧ್ಯವಿದೆ’ ಎಂದು ಹೇಳಿದರು.

ಕಲಬುರ್ಗಿಯ ವಿಟಿಯು ಕಾಲೇಜು ಪ್ರಾಧ್ಯಾಪಕ ಮಂಜುನಾಥ ಅವಲಕ್ಕಿ, ಪ್ರಾಧ್ಯಾಪಕ ಡಾ.ಶರಣಗೌಡ ಬಿರಾದಾರ ಮಾತನಾಡಿ, ‘ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ಇಲ್ಲ’ ಎಂದು ತಿಳಿಸಿದರು.

ಸಂಸ್ಥೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎನ್.ಟಿ.ದೇಶಮುಖ, ಪ್ರಾಚಾರ್ಯ ಸಂಜಯ ಎಸ್.ಪಾಟೀಲ, ವಾಣಿಜ್ಯ ವಿಭಾಗದ ಮುಖ್ಯಸ್ಥ ಮಲ್ಲಿಕಾ ರ್ಜುನ ಖಜೂರಿ, ಉದ್ಯಮಿ ದೇವಾನಂದ ಅಡ್ವಾನಿ ನಾಗರಾಜ ಪಟ್ಟಣಶೇಟ್ಟಿ, ಸಂಪತಕುಮಾರ ವೇದಪಾಠಕ, ಭೀಮಾಶಂಕರ ಮೋದಿ, ಮಹೇಶ ಹಿರೋಳಿ, ಮಹ್ಮದ ಪಲ್ಲಾ, ಮಹಾದೇವಿ ಪಾಟೀಲ, ಚಂದ್ರಶೇಖರ ಮುನ್ನೋಳಿ ಇದ್ದರು.

ಭಾಗ್ಯಶ್ರೀ ದಿಕ್ಸಂಗಿ ನಿರೂಪಿಸಿದರು. ಮಲ್ಲಿಕಾರ್ಜುನ ಖಜೂರಿ ಸ್ವಾಗತಿಸಿದರು. ಜಗದೀಶ ಮುಲಗೆ ವಂದಿಸಿದರು.

ಬಹುಮಾನ ವಿಜೇತರು: ರಸಪ್ರಶ್ನೆ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಸಂಬುದ್ಧ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಭಾಷಣ ಮತ್ತು ಆಶುಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಮೇಲಗೈ ಸಾಧಿಸಿದರು. ಎ.ವಿ.ಪಾಟೀಲ ಕಾಲೇಜು ವಿದ್ಯಾರ್ಥಿನಿ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.

ಪ್ರತಿಕ್ರಿಯಿಸಿ (+)