ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪೂರಕ ಪರೀಕ್ಷೆ: ಒಬ್ಬ ವಿದ್ಯಾರ್ಥಿನಿಗೆ 11 ಸಿಬ್ಬಂದಿ!

Published 29 ಮೇ 2023, 15:19 IST
Last Updated 29 ಮೇ 2023, 15:19 IST
ಅಕ್ಷರ ಗಾತ್ರ

ಚಿಂಚೋಳಿ: ದ್ವಿತೀಯ ಪಿಯು ಪೂರಕ ಪರೀಕ್ಷೆ ನಡೆಯುತ್ತಿರುವ ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಒಬ್ಬ ವಿದ್ಯಾರ್ಥಿನಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರದಲ್ಲಿ 11 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸಿದರು ಎಂದು ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ತಿಳಿಸಿದರು.

ವಿದ್ಯಾರ್ಥಿನಿ ಉರ್ದು ಭಾಷೆಯ ಪರೀಕ್ಷೆ ಎದುರಿಸಿದರು. ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೂ ಪರೀಕ್ಷೆ ನಡೆಯಿತು.

ಒಬ್ಬರು ಮುಖ್ಯ ಅಧೀಕ್ಷಕ, ಪ್ರಶ್ನೆಪತ್ರಿಕೆ ಪಾಲಕ, ಉತ್ತರ ಪತ್ರಿಕೆ ಪಾಲಕ, ಕಚೇರಿ ಅಧೀಕ್ಷಕ, ಸಹಾಯಕ, ಪರೀಕ್ಷಾ ಕೊಠಡಿ ಮೇಲ್ವಿಚಾರಕ, ಇಬ್ಬರು ಜಾಗೃತ ದಳದ ಸದಸ್ಯರು ಮತ್ತು ಕಲಬುರಗಿಯಿಂದ ಪ್ರಶ್ನೆಪತ್ರಿಕೆ ತರಲು ಮೂವರು ಹೀಗೆ ಒಬ್ಬ ಪರೀಕ್ಷಾರ್ಥಿಗೆ 11 ಮಂದಿ ಶ್ರಮಿಸಿದರು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT