ಖಮರುಲ್‌ ಹಿಂದುಳಿದ, ಅಲ್ಪಸಂಖ್ಯಾತರ ಧೀಮಂತ ನಾಯಕ

7
ಮಾಜಿ ಸಚಿವ ಖಮರುಲ್‌ ಇಸ್ಲಾಂ ಸ್ಮರಣೆ; ಶಾಸಕಿ ಕನೀಜ್‌ ಫಾತಿಮಾ ಬನ್ನಣೆ

ಖಮರುಲ್‌ ಹಿಂದುಳಿದ, ಅಲ್ಪಸಂಖ್ಯಾತರ ಧೀಮಂತ ನಾಯಕ

Published:
Updated:
Deccan Herald

ಕಲಬುರ್ಗಿ: ‘ಎಲ್ಲರೊಂದಿಗೆ ಸರಳವಾಗಿ ಬೆರೆಯುವುದೇ ಖಮರುಲ್‌ ಇಸ್ಲಾಂ ಅವರ ವ್ಯಕ್ತಿತ್ವದ ಮುಖ್ಯ ಅಂಶವಾಗಿತ್ತು. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತೇನೆ’ ಎಂದು ಶಾಸಕಿ ಕನೀಜ್‌ ಫಾತಿಮಾ ಹೇಳಿದರು.

ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಂಘಟನೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಯಾದ್‌ ಎ ಖಮರ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಖಮರುಲ್‌ ಅವರದು ಮರೆಯುವಂಥ ವ್ಯಕ್ತಿತ್ವವಲ್ಲ. ಹಾಗಾಗಿ, ಅವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವ ಪ್ರಮೇಯ ಬರುವುದಿಲ್ಲ. ದೇವರ ದೃಷ್ಟಿಯಲ್ಲಿ ನ್ಯಾಯಸಮ್ಮತವಾದ ಕೆಲಸ ಮಾಡುವವರು ಜಗತ್ತಿಗೆ ಹೆದರಬೇಕಾಗಿಲ್ಲ ಎನ್ನುವುದನ್ನು ನಾನು ಅವರಿಂದ ಅರಿತಿದ್ದೇನೆ’ ಎಂದು ನೆನಪುಗಳನ್ನು ಬಿಚ್ಚಿಟ್ಟರು.

ಉಪಮೇಯರ್‌ ಆಲಿಯಾ ಶಿರೀನ್‌ ಮಾತನಾಡಿ, ‘ಅಲ್ಪಸಂಖ್ಯಾತರು, ದಲಿತರು ಹಾಗೂ ತುಳಿತಕ್ಕೊಳಗಾದ ಜನರೇ ಹೆಚ್ಚಾಗಿರುವ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಖಮರುಲ್‌ ಅವರು ಬೆಳಕಾಗಿ ಬಂದರು. ಜಿಲ್ಲೆಯಲ್ಲಿ ಮಹಿಳಾ ಶಿಕ್ಷಣ ಹಾಗೂ ಸ್ವಾವಲಂಬನೆಗೆ ಅವರು ನೀಡಿದ ಕೊಡುಗೆ ಅಪಾರ’ ಎಂದು ಸ್ಮರಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಕ್ರಂ ನಖಾಶ್‌ ಮಾತನಾಡಿ, ‘ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅವರು ಮಾಡಿದ ಜನೋಪಯೋಗಿ ಕೆಲಸಗಳು ಸಾಕಷ್ಟು. ಚುನಾವಣೆಯಲ್ಲಿ ಮಾತ್ರ ಅವರಿಗೆ ವಿರೋಧಿಗಳಿದ್ದರು. ಅದರಾಚೆಗೆ ಯಾರ ವೈರತ್ವವನ್ನೂ ಕಟ್ಟಿಕೊಂಡವರಲ್ಲ’ ಎಂದರು.

ಮೇಯರ್‌ ಮಲ್ಲಮ್ಮ ಎಸ್‌. ವಳಕೇರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಎಚ್‌. ಮಾಲಾಜಿ, ವಕ್ಫ್‌ ಬೋರ್ಡ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್‌ ಖದೀರ್‌ ಚೊಂಗೆ, ಶಾಹೀನ್‌ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌, ಸ್ಲಂ ಬೋರ್ಡ್‌ ಎಂಜಿನಿಯರ್‌ ಅಬ್ದುಲ್‌ ಖಯಾಮ್‌, ಕೆಎಚ್‌ಬಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪೀರ್‌ಪಾಶಾ, ಸರ್ಜನ್‌ ಡಾ.ಅಸ್ಲಂ ಸಯೀದ್‌, ನಿವೃತ್ತ ಪ್ರಾಧ್ಯಾಪಕ ಅಬ್ದುಲ್‌ ಹಮೀದ್‌ ಅಕ್ಬರ್‌, ನಿವೃತ್ತ ಪ್ರಾಚಾರ್ಯ ಅಮ್ಜದ್‌ ಜಾವೀದ್‌ ವೇದಿಕೆ ಮೇಲಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಜೀಮುದ್ದಿನ್‌ ಶಿರ್ನಿಫರೋಶ್‌ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !