ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ರಾಣಿ ಚನ್ನಮ್ಮ ಆದರ್ಶ ಪಾಲಿಸಿ: ಪ್ರಕಾಶ ಕುದುರಿ

ನಗರದ ವಿವಿಧೆಡೆ ಜಯಂತಿ ಸರಳ ಆಚರಣೆ: ಭಾವಚಿತ್ರಕ್ಕೆ ಪೂಜೆ
Last Updated 24 ಅಕ್ಟೋಬರ್ 2021, 3:31 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಾಣ ಇರುವವರೆಗೂ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ ಇಂದಿನ ಮಹಿಳೆಯರಿಗೆ ಆದರ್ಶ. ಅದರಲ್ಲೂ ಆಧುನಿಕ ಮಹಿಳೆಯರು ಚನ್ನಮ್ಮ ಅವರ ಜೀವನ ಚರಿತ್ರೆ ಓದಬೇಕು’ ಎಂದು ತಹಶೀಲ್ದಾರ್ ಪ್ರಕಾಶ ಕುದುರಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಶನಿವಾರ ನಡೆದ ವೀರ ರಾಣಿ ಕಿತ್ತೂರು ಚನ್ನಮ್ಮ ಅವರ ಜಯಂತ್ಯುತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಅವರು ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶರಣು ಮೋದಿ ಹಾಗೂ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿದರು. ಆಳಂದ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಇಂದುಮತಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಡಾ.ನಾಗವೇಣಿ ಪಾಟೀಲ, ಪಂಚಮಸಾಲಿ ದೀಕ್ಷೆ ಸಮಾಜದ ಅಧ್ಯಕ್ಷ ಶರಣು ಪಪ್ಪಾ, ಜಿಲ್ಲಾ ವೀರಶೈವ ಸಮಾಜದ ಕಾರ್ಯದರ್ಶಿ ಡಾ.ಶ್ರೀಶೈಲ ಘೋಳಿ ಹಾಗೂ ಸಮಾಜದ ಮುಖಂಡರಾದ ಜಗನ್ನಾಥ ಪಟ್ಟಣಶೆಟ್ಟಿ, ಶರಣು ಖಾನಾಪುರೆ, ಸುಭಾಷ್ ಬಿಜಾಪುರೆ ಸೇರಿದಂತೆ ಸಮಾಜದ ಮುಖಂಡರು ಇದ್ದರು.

‘ತ್ಯಾಗ, ಸ್ವಾಭಿಮಾನದ ಸಂಕೇತ’
ಕಲಬುರಗಿ:
ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ದೊರಕಿಸಿ ಕೊಡುವಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ, ಮಾನವೀಯ ಮತ್ತು ನೈತಿಕ ಮೌಲ್ಯಗಳ ರಕ್ಷಣೆಗಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಅವರು ಶೂರ, ತ್ಯಾಗ, ಸ್ವಾಭಿಮಾನ, ದೇಶಪ್ರೇಮದ ಪ್ರತೀಕವಾಗಿದ್ದಾರೆ ಎಂದು ಪ್ರಾಂಶುಪಾಲ ಮಹಮ್ಮದ್ ಅಲ್ಲಾವುದ್ದೀನ ಸಾಗರ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ಸರ್ಕಾರಿ ಪಿಯು ಕಾಲೇಜು, ಪ್ರೌಢಶಾಲೆ ಮತ್ತು ಮೌಲಾನಾ ಆಜಾದ್ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತಿಹಾಸ ಉಪನ್ಯಾಸಕಿ ಚಂದ್ರಪ್ರಭಾ ಕಮಲಾಪುರಕರ್ ಮಾತನಾಡಿ, ಚನ್ನಮ್ಮ ಅವರು ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದರು.

ಕಾಲೇಜಿನ ಉಪನ್ಯಾಸಕರಾದ ರವಿಕುಮಾರ ಬಟಗೇರಿ, ನಯಿಮಾ ನಾಹಿದ್, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ಭೀಮಾಶಂಕರ ಕೋರಿ, ಯಶವಂತ ಗಾಣಿಗೇರ, ನೇಸರ ಬೀಳಗಿ, ಮುಖ್ಯ ಶಿಕ್ಷಕರಾದ ಮಹೇಶಕುಮಾರ ಚಿಂಚೋಳಿಕರ್, ಸಹ ಶಿಕ್ಷಕರಾದ ಸೋಮಶೇಖರ ಪಾಟೀಲ, ದಯಾನಂದ ಹಿರೇಮಠ, ಅನೀಲಕುಮಾರ ಸರಾಫ್, ತನುಜಾರಾಣಿ ಎಸ್., ಶಾಂತಾಬಾಯಿ ಮರ್ಚಲ್, ಚಿನ್ನು ಪಟೇಲ್, ಸುಮಿತ್ರಾ ಹತಗುಂದಿ, ದೇವರಾಜ ಹೊಸಮನಿ, ಮಲ್ಲಿಖ್ ಷರಾಫ್, ನಗ್ಮಾ ಶೇಖ್, ಸಿಬ್ಬಂದಿ ಭೀಮಣ್ಣ ಪಾಟೀಲ, ಲಾಲುಸಿಂಗ ರಾಠೋಡ, ಮೆಹಬೂಬಸಾಬ್ ಉಸ್ತಾದ, ಮಹ್ಮದ್ ಮೈನೂದ್ದೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT