ಕೆಂಭಾವಿ: ಪಟ್ಟಣದ ಸಮೀಪ ಏವೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2018ರಲ್ಲಿ ರೈತರ ಸಾಲ ಮನ್ನವಾದ ಮೇಲೆ ಸಾಲ ವಿತರಣೆ ಮಾಡಿರುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ರೈತರಿಗೆ ಸಾಲ ವಿತರಣೆ ಮಾಡಬೇಕು’ ಎಂದು ಏವೂರ ಪಿಕೆಪಿಎಸ್ ಸದಸ್ಯ ದೇವಿಂದ್ರಪ್ಪ ಲಕ್ಷ್ಮಣ ದೊರೆ ಆಗ್ರಹಿಸಿದ್ದಾರೆ.

‘ಏವೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ಈ ಬ್ಯಾಂಕ್ನಲ್ಲಿ ಸುಮಾರು 1100 ರೈತರು ಖಾತೆಯನ್ನು ಹೊಂದಿರುತ್ತಾರೆ. ಸದರಿ ರೈತರ ಪೈಕಿ ಸುಮಾರು 290 ಜನ ರೈತರ ಸಾಲವನ್ನು 2018ರಲ್ಲಿ ಮನ್ನಾ ಆಗಿದ್ದು, ಆ ರೈತರಿಗೆ ಇಲ್ಲಿಯವರೆಗೆ ಯಾವುದೇ ರೀತಿ ಹೊಸ ಸಾಲ ಕೊಟ್ಟಿರುವುದಿಲ್ಲ. ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ ಸಾಲ ಮಂಜೂರು ಆಗಿರುವುದಿಲ್ಲವೆಂದು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಈಗ ಬಿತ್ತನೆ ಸಮಯ ಬಂದಿರುವುದರಿಂದ ಬೀಜ, ಗೊಬ್ಬರ, ಕ್ರಿಮಿನಾಶಕ ಔಷಧಿಗಳ ಖರೀದಿಗಾಗಿ ರೈತರ ಹತ್ತಿರ ಹಣ ಇರುವುದಿಲ್ಲ. ಬ್ಯಾಂಕ್ಗಳು ರೈತರ ನೆರವಿಗೆ ಬಂದರೆ ಅವರು ಕೃಷಿ ಚಟುವಟಿಕೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ಸದರಿ ಬ್ಯಾಂಕ್ನಲ್ಲಿ ಸುಮಾರು 120 ಜನ ನೂತನ ಸದಸ್ಯರಿದ್ದು ಅವರಿಗೆ ಇಲ್ಲಿಯವರೆಗೆ ಯಾವುದೆ ಸಾಲ ಕೊಟ್ಟಿರುವುದಿಲ್ಲ. ಹೀಗಾಗಿ ಅವರಿಗೆ ಆದ್ಯತೆ ನೀಡಬೇಕು ನಂತರ ಮನ್ನಾ ಆದವರಿಗೆ ಕೊಡಬೇಕು. ಪ್ರತಿ ರೈತರಿಗೆ ₹50 ಸಾವಿರ ಸಾಲವನ್ನು ನೀಡಿ ಅನುಕೂಲ ಮಾಡಿಕೊಡಬೇಕು’ ಎಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-660287862

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.