ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ

7
ಅಫಜಲಪುರ ತಾಲ್ಲೂಕು ಅತನೂರಲ್ಲಿ 164 ಮಿಲಿ ಮೀಟರ್‌ ದಾಖಲೆಯ ಮಳೆ

ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ

Published:
Updated:
Deccan Herald

ಕಲಬುರ್ಗಿ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆಯ ವರೆಗೆ ಧಾರಾಕಾರ ಮಳೆ ಸುರಿದಿದೆ. ಗುರುವಾರ ಬೆಳಿಗ್ಗೆಯೂ ಜಿಟಿಜಿಟಿ ಮಳೆ ಮುಂದುವರೆದಿದೆ.

ಅಫಜಲಪುರ ತಾಲ್ಲೂಕು ಅತನೂರಲ್ಲಿ 164 ಮಿಲಿ ಮೀಟರ್‌ ಹಾಗೂ ಆಳಂದ ತಾಲ್ಲೂಕು ನಿಂಬರ್ಗಾದಲ್ಲಿ 112 ಮಿಲಿ ಮೀಟರ್‌ ದಾಖಲೆಯ ಮಳೆಯಾಗಿದೆ.

ಇಡೀ ರಾತ್ರಿ ಸುರಿದ ಮಳೆ ಬೆಳಿಗ್ಗೆಯೂ ಬಿಡುವು ಕೊಡದ ಕಾರಣ ಶಾಲಾ–ಕಾಲೇಜಿಗೆ ಹೋಗುವ ಮಕ್ಕಳು, ಕಚೇರಿಗೆ ಹೋಗುವವರು ತೊಂದರೆ ಅನುಭವಿಸಿದರು.

ಆದರೆ, ಮಳೆ ಇಲ್ಲದೆ ತೇವಾಂಶದ ಕೊರತೆ ಕಾರಣ ಬೆಳೆ ಒಣಗುತ್ತಿತ್ತು. ಬರದ ಛಾಯೆ ಆವರಿಸಿತ್ತು. ಈ ಮಳೆ ಬೆಳೆಗೆ ಜೀವ ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ:
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಮಳೆಯ ವಿವರ.
ಕಲಬುರ್ಗಿ ನಗರದಲ್ಲಿ ಒಂದೇ ರಾತ್ರಿ 54 ಮಿ.ಮೀ ಮಳೆಯಾಗಿದೆ.

ಅಫಜಲಪುರ 36, ಅತನೂರ 164, ಕರಜಗಿ 30, ಆಳಂದ 95, ಮಾದನ ಹಿಪ್ಪರಗಾ 77, ನರೋಣಾ 36, ಅಡಕಿ 28, ಕೋಡ್ಲಾ 25, ಮುಧೋಳ 30, ನಿಂಬಾಳ ತಾಂಡಾ 81, ಪಟ್ಟಣ 34, ಆಂದೋಲಾ 28, ನೆಲೋಗಿ 14, ಫರಹತಾಬಾದ್‌ 52, ಇಜೇರಿ 4, ಜೇವರ್ಗಿ 26, ಮಹಾಗಾಂವ ತಾಂಡಾ 34, ಯಡ್ರಾಮಿ 12, ಕಾಳಗಿ 30, ನಾಲವಾರ 38, ಶಹಾಬಾದ್‌ 59, ಅವರಾದ 26, ಕಮಲಾಪುರ 41, ಜೈನಾಪುರ 32, ಸುಲೇಪೇಟೆ 36, ಚಿತ್ತಾಪುರ 29, ಗುಂಡಗುರ್ತಿ 30. ಆಳಂದ 50, ಖಜೂರಿ 36, ಸರಸಂಬಾ 51, ಕೋರಳ್ಳಿ 34 ಮಿ.ಮೀ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !