ಭಾನುವಾರ, ಮೇ 22, 2022
23 °C

ಚಿಂಚೋಳಿ: ಮುಂದುವರಿದ ವರುಣನ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆಯ ಕಾಟ ಮುಂದುವರೆದಿದೆ. ಮಳೆಗಾಲ ಮುಗಿದರೂ ಮಳೆ ಸುರಿಯುವುದು ಮಾತ್ರ ನಿಲ್ಲುತ್ತಿಲ್ಲ ಇದರಿಂದ ರೈತರು ಕಂಗಾಲಾಗಿದ್ದಾರೆ.

ನಿರಂತರ ಮಲೆ ಸುರಿಯುತ್ತಿರುವುದರಿಂದ ಹೊಲಗಳಲ್ಲಿ ಕಳೆಯ ಕಾಟ ವಿಪರೀತವಾಗಿದೆ. ಇದರಿಂದ ಹಿಂಗಾರು ಬಿತ್ತನೆಯ ಚಿಂತೆ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನ ಚಿಮ್ಮನಚೋಡ, ಸಲಗರ ಬಸಂತಪುರ, ಐನಾಪುರ, ಗಡಿಲಿಂಗದಳ್ಳಿ, ಚಂದನಕೇರಾ, ಕನಕಪುರ, ಚನ್ನೂರು, ಚಿಂಚೋಳಿ, ಸುಲೇಪೇಟ, ಕುಂಚಾವರಂ ಮೊದಲಾದ ಕಡೆ ಮಳೆ ಸುರಿದಿದೆ. ಆದರೆ ಕನಕಪುರ, ತಾಜಲಾಪುರ ಮತ್ತು ಗಾರಂಪಳ್ಳಿ ಮಧ್ಯೆ ಮಳೆ ಜೋರಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ನಿರಂತರ ಮಳೆಯಿಂದ ರೈತರ ಹೊಲಗಳು ಕಳೆಯಿಂದ ತುಂಬಿಹೋಗಿವೆ. ಹೊಲ ಹಸನು ಮಾಡಲು ಬಿಡುವು ನೀಡದೇ ಮಳೆ ಕಾಡುತ್ತಿರುವುದರಿಂದ ರೈತರು ಕಡಲೆ ಹಾಗೂ ಜೋಳ ಬಿತ್ತನೆ ಮಾಡದೇ ಮಳೆ ಯಾವಾಗ ನಿಲ್ಲುತ್ತದೆ ಎಂದು ಆಗಸ ನೋಡುತ್ತ ಕುಳಿತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.