ಕಲಬುರಗಿ: ಬಿಸಿಲಿನಿಂದ ತತ್ತರಿಸಿದ್ದ ಕಲ್ಯಾಣ ಕರ್ನಾಟಕದ ವಿವಿಧೆಡೆ ಶುಕ್ರವಾರ ಸುರಿದ ಮಳೆ ತುಸು ತಂಪೆರೆದಿದೆ.

ಕೊಪ್ಪಳ ತಾಲ್ಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಕುರಿಗಾಹಿ ಕರಿಯಪ್ಪ ದ್ಯಾಮಣ್ಣ ಮ್ಯಾದ್ನೇರಿ (35) ಮೃತಪಟ್ಟಿದ್ದಾರೆ. ಗಂಗಾವತಿ ತಾಲ್ಲೂಕಿನಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ. ಸಿದ್ದಿಕೇರಿ ಗ್ರಾಮದ ಜಮೀನಿನಲ್ಲಿ ಕಟ್ಟಿದ್ದ 6 ಆಕಳುಗಳು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ.

ಕಲಬುರಗಿಯಲ್ಲಿ ಶುಕ್ರವಾರ ದಿನವಿಡೀ ಪ್ರಖರ ಬಿಸಿಲಿತ್ತು. ಸಂಜೆ ಹೊತ್ತಿಗೆ ಆಗಸದಲ್ಲಿ ಮೋಡಗಳು ದಟ್ಟೈಸಿತು. ಬಳಿಕ ಮಿಂಚು–ಬಿರುಗಾಳಿ ಸಹಿತ ಕಲಬುರಗಿ ನಗರ, ಚಿಂಚೋಳಿ, ಕಾಳಗಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಚಿಂಚೋಳಿ ತಾಲ್ಲೂಕಿನ ಭೂಂಯಾರ (ಕೆ) ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕಾಳಗಿಯಲ್ಲಿ ಬಿರುಗಾಳಿಗೆ ರಟಕಲ್ ವಿರಕ್ತಮಠದ ಕಾರ್ಯಕ್ರಮಕ್ಕಾಗಿ ಹಾಕಿದ್ದ ಪೆಂಡಾಲ್ ಮಗುಚಿದೆ. ಕಲಬುರಗಿಯಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕಾಗಿ ಹಾಕಿದ್ದ ವಿದ್ಯುದ್ದೀಪಗಳ ಕಂಬವೊಂದು ನೆಲಕ್ಕೆ ವಾಲಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಡಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.