ಕಲಬುರಗಿ: ಆಗಷ್ಟೆ ರಾತ್ರಿ ಗಾಢವಾಗುತ್ತಿತ್ತು. ಅತ್ತ ಆಗಸದಲ್ಲಿ ತುಂತುರು ಮಳೆ ಸಿಂಚನವಾಯಿತು. ಇತ್ತ ‘ಯುಕ್ತಿ’ ಸಮಾರಂಭದ ವೇದಿಕೆಯಲ್ಲಿ ‘ಸಂಗೀತ ಸುಧೆ’ ಹರಿಯಿತು.

ನಗರದ ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ‘ಯುಕ್ತಿ–2026’ ಕಾರ್ಯಕ್ರಮದ ಭಾಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಗೀತ ಸಂಜೆಯಲ್ಲಿ ಮೆಲೋಡಿ ರಾಜ ರಾಜೇಶ್ ಕೃಷ್ಣನ್ ಹಾಗೂ ಗಾಯಕಿ ಶಮಿತಾ ಮಲ್ನಾಡ್ ಗಾಯನದ ಹೊಳೆ ಹರಿಸಿದರು. ಆಹ್ವಾನಿತ ಗಣ್ಯರು ಸೇರಿದಂತೆ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತದ ರಸದೌತಣ ಉಣಬಡಿಸಿದರು.

ಒಂದು ತಾಸಿನಷ್ಟು ಸಹಕಲಾವಿದರ ಗಾಯನ ನಡೆಯಿತು. ರಾತ್ರಿ 8 ಗಂಟೆಗೆ ಗಾಯಕಿ ಶಮಿತಾ ಮಲ್ನಾಡ, ‘ನಮಸ್ಕಾರ ಕಲಬುರಗಿ...’ ಎನ್ನುತ್ತ ವೇದಿಕೆಗೆ ಬಂದರು. ‘ಮಧುರ ಪಿಸು ಮಾತಿಗೆ, ಅದರ ತುಸು ಪ್ರೀತಿಗೆ’ ಹಾಡಿ ಸಂಗೀತದ ರಸದೌತಣಕ್ಕೆ ಮುನ್ನುಡಿ ಬರೆದರು.

‘ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು, ನಿನ್ನ ಕೈಲಾಡುವ ಗೊಂಬೆ ನಾನಯ್ಯ’ ಎಂದು ಹಾಡುತ್ತ ಡಾ.ರಾಜ್ಕುಮಾರ್ ಅವರನ್ನು ಸ್ಮರಿಸಿದರು. ಬಳಿಕ ರಾತ್ರಿ 8.20ಕ್ಕೆ ರಾಜೇಶ್ ಕೃಷ್ಣನ್ ವೇದಿಕೆ ಏರಿದರು. ನೆರೆದಿದ್ದ ಜನರು ‘ಹೋ...’ ಎಂದು ಉದ್ಗಾರ ಮೊಳಗಿಸಿದರು.

‘ಯಾರು... ಕಣ್ಣಿನಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸ್ಸಿನಿಟ್ಟು ಒಳಗಿಂದಲ್ಲೆ ನನ್ನ ಕದ್ದವರು ಯಾರೊ?’ ಎಂದು ಸಭೀಕರನ್ನು ಗಾನದಲ್ಲೇ ಪ್ರಶ್ನಿಸಿದರು. ಆಗಲೂ ಮಳೆ ಸುರಿಯುತ್ತಲೇ ಇತ್ತು. ‘ತುಸು ಹೊತ್ತು ಮಳೆ ನಿಲ್ಲಲಿ’ ಎಂದು ರಾಜೇಶ್ ಕೃಷ್ಣನ್ ಕೋರಿದರು. ಬಳಿಕ ‘ಉಸಿರೆ, ಉಸಿರೇ... ಈ ಉಸಿರ ಕೊಲ್ಲಬೇಡ...’ ಎನ್ನುತ್ತ ಎದುರಿಗಿದ್ದವರ ವೀಕ್ಷಕರ ಹೃದಯ ಗೆದ್ದರು. ಅಷ್ಟೊತ್ತಿಗೆ ಮಳೆ ನಿಂತಿತು. ಆದರೆ, ಗಾಯನದ ಮೂಲಕ ‘ಸಂಗೀತ ಸುಧೆ’ ಹರಿಸಿದರು.

‘ನೂರು ಜನ್ಮಕೂ ನೂರಾರು ಜನ್ಮಕೂ... ಒಲವ ಧಾರೆಯೇ ಒಲಿದುಒಲಿದು ಬಾರೆಯೇ...ನನ್ನ ಆತ್ಮ, ನನ್ನ ಪ್ರಾಣ ನೀ ಎಂದೂ’ ಎನ್ನುತ್ತಲೇ ಕಲಬುರಗಿ ಜನರೊಂದಿಗೆ ವಿಡಿಯೊ ಸೆಲ್ಫಿ ತೆಗೆದುಕೊಂಡರು.

‘ಫಹಲಾ ಫಹಲಾ ಪ್ಯಾರ್ ಹೈ...ಫಹಲಿ ಫಹಲಿ ಬಾರ್ ಹೈ’ ಹಿಂದಿ ಗೀತೆಗೂ ಧ್ವನಿಯಾದರು. ‘ಕವಿತೆ, ಕವಿತೆ ನೀನೇಕೇ ಪದಗಳಲ್ಲಿ ಕುಳಿತೆ? ಕವಿತೆ ಕವಿತೆ ನೀನೇಕೇ ಗಾನದಲ್ಲಿ ಅವಿತೆ?’ ಎಂದೂ ರಾಜೇಶ್ ಗಾಯನದಲ್ಲೇ ಪ್ರಶ್ನಿಸಿದರು. 45 ನಿಮಿಷಗಳ ರಾಜೇಶ್ ಗಾಯನದ ಸ್ವರ ಮಾಧುರ್ಯಕ್ಕೆ ನೆರೆದಿದ್ದ ಜನ ತಲೆದೂಗಿದರು.

ಬಳಿಕ ಮತ್ತೆ ವೇದಿಕೆ ಏರಿದ ಶಮಿತಾ ಮಲ್ನಾಡ್, ಹಿಂದಿ ಡಾನ್ ಚಿತ್ರದ ‘ಯೇ ಮೇರಾ ದಿಲ್ ಪ್ಯಾರಕಾ ದೀವಾನಾ...’ ಹಾಗೂ ಗಜ ಚಿತ್ರದ ‘ಐತಲಕಡಿ...’ ಗೀತೆ ಹಾಡಿ ಯುವಕರ ಎದ್ದೆಯಲ್ಲಿ ಕಿಚ್ಚು ಹೆಚ್ಚಿದರು. ಉತ್ತರ ಕರ್ನಾಟಕದ ಜವಾರಿ ಹಾಡು ‘ಚುಟು ಚುಟು ಅಂತೈತಿ’ ಹಾಡಿ ಪಡ್ಡೆ ಹುಡುಗರನ್ನು ಕುಣಿಸಿದರು.

ಬಳಿಕ ರಾಜೇಶ್ ಹಾಗೂ ಶಮಿತಾ ಜೊತೆಯಾಗಿ ಶಂಕರನಾಗ್ ಅವರ ಚಿತ್ರದ ‘ಜೊತೆಯಲಿ... ಜೊತೆ–ಜೊತೆಯಲಿ ಎಂದೂ ಹೀಗೆ...’ ಹಾಗೂ ‘ಸುಂಟರಗಾಳಿ, ಸುಂಟರಗಾಳಿ’ ಡುಯೇಟ್ ಗೀತೆಗಳಿಗೆ ಧ್ವನಿಯಾದರು. ಮತ್ತೆ ಮಳೆ ಸುರಿದು ‘ಸಂಗೀತ ಸಂಜೆ’ಗೆ ಮೊಟಕುಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.