ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ರಾಜ್ಯೋತ್ಸವ, ಸನ್ಮಾನ ನಾಳೆ

Last Updated 23 ನವೆಂಬರ್ 2020, 11:23 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜೈ ಕನ್ನಡಿಗರ ಸೇನೆ ವತಿಯಿಂದ ನಗರದ ಕನ್ನಡ ಭವನದಲ್ಲಿ ನ. 25ರಂದು ಬೆಳಿಗ್ಗೆ 11ಕ್ಕೆ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ’ ಸಂಘನೆಯ ಅಧ್ಯಕ್ಷ ದತ್ತು ಎಚ್‌. ಭಾಸಗಿ ಹೇಳಿದರು.

‘ಕಾರ್ಯಕ್ರಮದಲ್ಲಿ ನಾಡಿನ ನೆಲ, ಜಲ, ಸಂಸ್ಕೃತಿ, ಭಾಷಾ ರಕ್ಷಣೆ ಬಗ್ಗೆ ಉಪನ್ಯಾಸ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗಣನೀಯ ಸೇವೆ ಸಲ್ಲಿಸಿದ ‘ಕಾಯಕಶ್ರೀ ರತ್ನ’ ಪ್ರಶಸ್ತಿ ನೀಡಲಾಗುವುದು’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಡಾ.ಎಸ್‌.ಬಿ. ಕಾಮರೆಡ್ಡಿ, ಡಾ.ವಿಕ್ರಮ ಸಿದ್ದಾರೆಡ್ಡಿ, ಡಾ.ಸನ್ಮಾನ್‌ ಪಟೇಲ್‌, ಡಾ.ಕೈಲಾಶ ಬನಾಳೆ (ಆರೋಗ್ಯ ಕ್ಷೇತ್ರ), ಫರಹತಾಬಾದ್‌ ಪಿಎಸ್‌ಐ ಯಶೋದಾ ಕಟಕೆ, ಸಂಚಾರ ಪೊಲೀಸ್‌ ಭಾರತಿ ಧನ್ನಿ (ಪೊಲೀಸ್‌ ಸೇವೆ), ವಲಿ ಅಹ್ಮದ್‌ (ಹೋರಾಟ), ಶರಣು ಗದ್ದುಗೆ (ಸಮಾಜ ಸೇವೆ), ಅಸ್ಲಂ ಚವಗೆ, ಪ್ರೊ.ಸಿದ್ದಪ್ಪ ಎಂ. ಕಾಂತಾ, ಬಾಬುರಾವ್‌ ಮೊಳಕೇರಿ (ಶಿಕ್ಷಣ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದರೊಂದಿಗೆ ಕೋವಿಡ್‌ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ 20 ಆಶಾ ಕಾರ್ಯಕರ್ತೆಯರನ್ನೂ ಸನ್ಮಾನಿಸಲಾಗುವುದು’ ಎಂದರು.

ಸೊಂತ ದತ್ತ ದಿಗಂಬರ ಶಂಕರಲಿಂಗ ಮಹಾರಾಜರು ಸಾನ್ನಿಧ್ಯ ವಹಿಸುವರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸುವರು. ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕ ಡಾ.ಅಜಯಸಿಂಗ್‌ ಮಾಲಾರ್ಪಣೆ ಮಾಡುವರು. ಅಧ್ಯಕ್ಷತೆಯನ್ನು ದತ್ತು ಭಾಸಗಿ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಕೇಶ್ವರ, ಉಪಾಧ್ಯಕ್ಷ ರಿತೇಶ ಮುಗನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT