ಚಿಂಚೋಳಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಹಮ್ಮಿಕೊಂಡ ಮೈಸೂರು ಚಲೋ ಪಾದಯಾತ್ರೆಗೆ ಚಿಂಚೋಳಿ ಬಿಜೆಪಿ ಕಾರ್ಯಕರ್ತರು ಪ್ರಯಾಣ ಬೆಳೆಸಿದರು.
‘ನಾವು ಬಸ್‌ನಲ್ಲಿ 32 ಮಂದಿ ತೆರಳಿದ್ದೇವೆ. ಕೆಲವರು ಸ್ವಂತ ವಾಹನಗಳಲ್ಲಿ ತೆರಳಿದ್ದಾರೆ. ಜತೆಗೆ ರೈಲಿನ ಮೂಲಕವೂ ಬೆಲಕಗಳೂರಿಗೆ ಹೊರಟಿದ್ದಾರೆ. ಚಿಂಚೋಳಿ ಮತಕ್ಷೇತ್ರದ ಸುಮಾರು 60ರಿಂದ 70 ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಬಿಜೆಪಿಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ ತಿಳಿಸಿದರು.
ಇಲ್ಕಿನ ಬಸವೇಶ್ವರ ವೃತ್ತದಿಂದ ಬಸ್ ತೆರಳಿದ್ದು, ಹಿರಿಯ ಮುಖಂಡ ಭೀಮಶೆಟ್ಟಿ ಮುರುಡಾ, ಕೆ.ಎಂ. ಬಾರಿ ಅವರು ಬಾವುಟ ತೋರಿಸಿ ಬೀಳ್ಕೊಟ್ಟರು.