ರಂಗಾಯಣದಲ್ಲಿ ‘ಅಡುಗೆ ಪರಿಕರ’ಗಳೊಂದಿಗೆ ಪ್ರತಿಭಟನೆ

7

ರಂಗಾಯಣದಲ್ಲಿ ‘ಅಡುಗೆ ಪರಿಕರ’ಗಳೊಂದಿಗೆ ಪ್ರತಿಭಟನೆ

Published:
Updated:
ಗೌರವಧನ ನೀಡುವಂತೆ ಒತ್ತಾಯಿಸಿ ರಂಗಾಯಣ ಕಲಾವಿದರು ಹಾಗೂ ತಂತ್ರಜ್ಞರು ಕಲಬುರ್ಗಿಯ ರಂಗಾಯಣ ಕಚೇರಿಯಲ್ಲಿ ಬುಧವಾರ ಪ್ರತಿಭಟನೆ ಮಾಡಿದರು

ಕಲಬುರ್ಗಿ: ಮೂರು ತಿಂಗಳಿನಿಂದ ಗೌರವಧನ,ಭತ್ಯೆ ನೀಡಿಲ್ಲ ಎಂದು ಆರೋಪಿಸಿ ಇಬ್ಬರು ಕಲಾವಿದರು, ಒಬ್ಬರು ತಂತ್ರಜ್ಞ ಸೇರಿದಂತೆ ಮೂವರು ಕಲಬುರ್ಗಿ ರಂಗಾಯಣ ಕಚೇರಿಯಲ್ಲಿ ಬುಧವಾರ ಅಡುಗೆ ಪರಿಕರಗಳೊಂದಿಗೆ ಪ್ರತಿಭಟನೆ ಮಾಡಿದರು.

ಕಲಾವಿದರಾದ ಬೀರಣ್ಣ ಮಾಳಪ್ಪ ಪೂಜಾರಿ, ಮೋಹನಕುಮಾರ ಶರಣಪ್ಪ ಹುಲಿಮನಿ ಹಾಗೂ ತಂತ್ರಜ್ಞ ದೇವೀಂದ್ರ ಗುರುನಾಥ ಬಡಿಗೇರ ಅವರು ತಮ್ಮ ಮನೆಯಲ್ಲಿನ ಸಾಮಾನು, ಸರಂಜಾಮುಗಳೊಂದಿಗೆ ಪ್ರತಿಭಟನೆ ಮಾಡಿ, ನಿರ್ದೇಶರ ಗಮನ ಸೆಳೆದರು. ತಕ್ಷಣ ಗೌರವಧನ, ಭತ್ತೆ ಪಾವತಿಸುವಂತೆ ಒತ್ತಾಯಿಸಿದರು.

‘ಕುಡಿದು ಬಂದು ಗಲಾಟೆ ಮಾಡಿದ ಆರೋಪದ ಮೇಲೆ ಏಪ್ರಿಲ್ 8ರಿಂದ ನಮ್ಮನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಗೌರವಧನ ನೀಡದ್ದರಿಂದ ನಾವು ಮನೆ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ಮನೆ ಮಾಲೀಕರು ಮನೆ ಖಾಲಿ ಮಾಡಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಿದ್ದಿದೆ. ಆದ್ದರಿಂದ ಕೂಡಲೇ ಗೌರವಧನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಏಪ್ರಿಲ್ 8ರಂದು ದೂರು ದಾಖಲು: ‘ಏ. 7ರಂದು ಕಲಾವಿದರೆಲ್ಲರೂ ಸಂಗೀತದ ಪೂರ್ವಾಭ್ಯಾಸದಲ್ಲಿ ತೊಡಗಿದ್ದರು. ಆಗ ಕುಡಿದು ಬಂದ ಬೀರಣ್ಣ, ಮೋಹನಕುಮಾರ, ದೇವೀಂದ್ರ ಅವರು ಸಹ ಕಲಾವಿದೆಯರೊಂದಿಗೆ ಅನುಚಿತವಾಗಿ ವರ್ತಿಸಿ, ನಿಂದಿಸಿದ್ದರು. ಬುದ್ಧಿ ಹೇಳಿದ ತಮಗೆ ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು’ ಎಂದು ಆರೋಪಿಸಿ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ಅವರು ಏಪ್ರಿಲ್‌ 8ರಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂವರೂ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !