ಪಡಿತರ ಧಾನ್ಯ ವಿತರಣೆ
ಕಲಬುರ್ಗಿ: ಕೋವಿಡ್ ತುರ್ತು ಪರಿಸ್ಥಿತಿಯ ಕಾರಣ ಜಿಲ್ಲೆಯ ಎಎವೈ/ ಅಂತ್ಯೋದಯ ಅನ್ನ, ಪಿ.ಎಚ್.ಎಚ್./ ಆದ್ಯತಾ ಹಾಗೂ ಎ.ಪಿ.ಎಲ್. (ಆದ್ಯತೇತರ) ಪಡಿತರ ಚೀಟಿ ಕಾರ್ಡುದಾರರಿಗೆ ಜುಲೈ ತಿಂಗಳ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಧಾನ್ಯವನ್ನು ಪಡೆಯಬಹುದು. ಜಿಲ್ಲೆಯ 63,459 ಎಎವೈ ಪಡಿತರ ಚೀಟಿಗಳ 2,64,260 ಸದಸ್ಯರಿಗೆ ಮತ್ತು 4,89,100 ಪಿ.ಎಚ್.ಎಚ್. ಪಡಿತರ ಚೀಟಿಗಳ 16,60,428 ಸದಸ್ಯರಿಗೆ ಹಾಗೂ 18,263 ಎ.ಪಿ.ಎಲ್. (ವಿಲ್ಲಿಂಗ್‍ನೆಸ್) ಪಡಿತರ ಕಾರ್ಡುದಾರರಿಗೆ ಧಾನ್ಯ ವಿತರಿಸಲಾಗುತ್ತಿದೆ.
ಪಡಿತರ ಚೀಟಿಯ ಮಾದರಿ ಹಾಗೂ ಧಾನ್ಯ ವಿತರಣಾ ಪ್ರಮಾಣ ಈ ಕೆಳಗಿನಂತಿದೆ.
ಎಎವೈ/ ಅಂತ್ಯೋದಯ ಅನ್ನ ಪಡಿತರ ಚೀಟಿ: ಪ್ರತಿ ಪಡಿತರ ಚೀಟಿ ಸದಸ್ಯರಿಗೆ 20 ಕೆ.ಜಿ. ಜೋಳ, 15 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ ಅಕ್ಕಿ ಉಚಿತ ವಿತರಣೆ.
ಪಿ.ಎಚ್.ಎಚ್/ ಆದ್ಯತಾ: 3 ಕೆ.ಜಿ. ಜೋಳ, 2 ಕೆ.ಜಿ ಅಕ್ಕಿ, 5 ಕೆ.ಜಿ ಅಕ್ಕಿ, 2 ಕೆ.ಜಿ. ಗೋಧಿ ಉಚಿತವಾಗಿ ನೀಡಲಾಗುವುದು.
ಎಪಿಎಲ್ /ಆದ್ಯತೇತರ: ಏಕಸದಸ್ಯ ಇರುವ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಮತ್ತು ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ದರ ₹ 15ರಂತೆ ವಿತರಿಸಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.