ಸೋಮವಾರ, ಫೆಬ್ರವರಿ 24, 2020
19 °C

ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಗ್ರಾಮ ಲೆಕ್ಕಿಗರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ವಿಭಾಗದ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ನಿಯೋಜನೆ ಮೇರೆಗೆ ಎಲ್ಲ ಕಚೇರಿಗಳಲ್ಲಿರುವ ಗ್ರಾಮಲೆಕ್ಕಿಗರನ್ನು ಲಿಪಿಕ ಸೇವೆಯಿಂದ ಬಿಡುಗಡೆಗೊಳಿಸಿ, ಅವರು ಕ್ಷೇತ್ರವ್ಯಾಪ್ತಿಯಡಿ ಕಾರ್ಯನಿರ್ವಹಿಸುವಂತೆ ಕ್ರಮ ಜರುಗಿಸಬೇಕೆಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ತಿಳಿಸಿದ್ದಾರೆ.

ಒಂದು ವೇಳೆ ಈ ಆದೇಶಗಳನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟವರನ್ನು ಅಧಿಕಾರಿಗಳನ್ಣೇ ಜವಾಬ್ದಾರಿಯನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು. ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕುರಿತು ಸರ್ಕಾರದ ನಿರ್ದೇಶನಗಳಿದ್ದು, ಅವರ ಸೇವೆಯೂ ಕ್ಷೇತ್ರದಲ್ಲಿ ಅವಶ್ಯವಿದ್ದರೂ, ಗ್ರಾಮಲೆಕ್ಕಿಗರಿಗೆ ಲಿಪಿಕ ಕೆಲಸಗಳಿಗೆ ನಿಯೋಜಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಆಡಳಿತ ಮತ್ತು ಭೂಕಂದಾಯ ಕಾಯ್ದೆಯಡಿ ಗೊತ್ತುಪಡಿಸಿರುವಂತೆ ಕ್ಷೇತ್ರ ಸೇವೆಗಳನ್ನು ನಿರ್ವಹಿಸುವ ದೃಷ್ಟಿಯಿಂದ ಸಂದರ್ಭನುಸಾರ ನಿಯೋಜನೆ ಮೇರೆಗೆ ತೈನಾತಿಕೊಂಡಿರುವ ಎಲ್ಲಾ ಕಚೇರಿಗಳಲ್ಲಿನ ಗ್ರಾಮಲೆಕ್ಕಿಗರನ್ನು ಲಿಪಿಕ ಸೇವೆಯಿಂದ ಬಿಡುಗಡೆಗೊಳಿಸಿ, ಅವರಿಗೆ ಸ್ಥಳ ನಿಯುಕ್ತಿಗೊಳಿಸಿ ಕ್ಷೇತ್ರವ್ಯಾಪ್ತಿಯಡಿ ಕಾರ್ಯನಿರ್ವಹಿಸುವಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು