ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Published : 21 ಆಗಸ್ಟ್ 2024, 7:28 IST
Last Updated : 21 ಆಗಸ್ಟ್ 2024, 7:28 IST
ಫಾಲೋ ಮಾಡಿ
Comments

ಚಿಂಚೋಳಿ: ಇಲ್ಲಿನ ಚಂದಾಪುರದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಲೋಕಾಯುಕ್ತ ಡಿವೈಎಸ್‌ಪಿ ಗೀತಾ ಬೇನಾಳ, ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ ಸದಲಾಪುರೆ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್ ಸೇರಿ ತಾಲ್ಲೂಕು ಅಧಿಕಾರಿಗಳು ಮನವಿಗಳನ್ನು ಸ್ವೀಕರಿಸಿದರು.

ಕೆಳದಂಡೆ ಮುಲ್ಲಾಮಾರಿ ಯೋಜನೆಯ ಭೂಸ್ವಾಧೀನ ಸಮಸ್ಯೆ, ಪರಿಹಾರ ಸಿಗದಿರುವುದು, ಅರ್ಜಿಗಳನ್ನು ತಹಶೀಲ್ದಾರರು ವಿನಾಕಾರಣ ಅಲೆದಾಡಿಸುತ್ತಿರುವುದು, ಅಂಗನವಾಡಿ ಸ್ಥಳಾಂತರ, ರೈತರ ಹೊಲಗಳಿಗೆ ರಸ್ತೆ ಇಲ್ಲದ ಬಗ್ಗೆ, ಪಟ್ಟೆದಾರರು ದಾರಿ ಬಿಡದಿರುವುದು ಸೇರಿದಂತೆ ಮೊದಲಾದವುಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಕೊರಡಂಪಳ್ಳಿಯ ಸಂಗೀತಾ, ರೇವಣಸಿದ್ದಪ್ಪ ರಾಮತೀರ್ಥ, ತುಳಸಿರಾಮ ಪೋಳ, ರವಿಶಂಕರರಡ್ಡಿ ಸೇರಿದಂತೆ ಅನೇಕರು ಅಹವಾಲು ಸಲ್ಲಿಸಿದರು.

ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ವೀರಭೂಷಣ ಮಠ, ಬಸವರಾಜ ಬೈನೂರ, ಡಾ. ಧನರಾಜ ಬೊಮ್ಮ, ಮಹಮದ ಗಫಾರ, ಇಂದುಧರ ಮಂಗಲಗಿ, ಪ್ರವೀಣಕುಮಾರ, ಚೇತನ ಕಳಸ್ಕರ, ಪ್ರಭುಲಿಂಗ ವಾಲಿ, ಕಾಶಿನಾಥ ಧನ್ನಿ, ಗಂಗಮ್ಮ ಜೀನಿಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT