ಕೊಡಗು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ರವಾನೆ

7

ಕೊಡಗು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ರವಾನೆ

Published:
Updated:

ಕಲಬುರ್ಗಿ: ಪ್ರವಾಹದಿಂದ ಹಾನಿಗೊಳಗಾದ ಕೊಡಗು ಸಂತ್ರಸ್ತರಿಗೆ ಜಿಲ್ಲೆಯ ವಿವಿಧ ಸಂಘ–ಸಂಸ್ಥೆಗಳು, ಶಾಲಾ–ಕಾಲೇಜುಗಳು, ದಾನಿಗಳು ಹಾಗೂ ಸಾರ್ವಜನಿಕರಿಂದ ಸ್ವೀಕೃತವಾದ ಪರಿಹಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಕೊಡಗು ಜಿಲ್ಲಾಡಳಿತಕ್ಕೆ ಶುಕ್ರವಾರ ರವಾನಿಸಲಾಯಿತು.

ಮಹಿಳೆ ಮತ್ತು ಮಕ್ಕಳ ಬಟ್ಟೆಗಳು, ಪಾತ್ರೆ, ಊಟದ ತಟ್ಟೆ, ಲೋಟಾ, ಚಮಚ, ಪ್ಲಾಸ್ಟಿಕ್ ಕೊಡ, ಬಕೆಟ್, ಸಾಬೂನು, ಚಪ್ಪಲಿ, ಶಾಲ್, ಟವೆಲ್, ಟೂತ್‌ಪೇಸ್ಟ್, ಅಡುಗೆ ಎಣ್ಣೆ, ಅಕ್ಕಿ, ನೀರಿನ ಬಾಟಲ್‌ ಸೇರಿದಂತೆ ಅನೇಕ ವಸ್ತುಗಳನ್ನು ನಗರದ ಸೇಂಟ್ ಮೇರಿ ಶಾಲೆಯಿಂದ ಲಾರಿ ಮೂಲಕ ರವಾನಿಸಲಾಯಿತು.

‘ಪರಿಹಾರ ಸಾಮಗ್ರಿಗಳನ್ನು ಮೊದಲು ಒಂದೆಡೆ ಸಂಗ್ರಹಿಸಲಾಗುತ್ತದೆ. ಒಂದು ಲಾರಿಯಷ್ಟು ಆದ ಬಳಿಕ ರವಾನಿಸಲಾಗುತ್ತದೆ. ದಾನಿಗಳು ಕೊಡುತ್ತಿದ್ದಂತೆಯೇ ಕಳುಹಿಸಲು ಆಗುವುದಿಲ್ಲ. ಇದು ಒಂದೆಡೆಯಾದರೆ, ಇನ್ನೊಂದೆಡೆ ಬಸವ ಎಕ್ಸ್‌ಪ್ರೆಸ್‌ ರೈಲಿನ ಮಾರ್ಗವನ್ನು ಕೆಲವು ದಿನ ಬದಲಾಯಿಸಲಾಗಿತ್ತು. ಹೀಗಾಗಿ ಸ್ವಲ್ಪ ವಿಳಂಬವಾಗಿದೆ. ಆದಾಗ್ಯೂ ಮೊದಲ ಹಂತದಲ್ಲಿ ಒಂದು ಲಾರಿ ಪರಿಹಾರ ಸಾಮಗ್ರಿ ಹಾಗೂ ಔಷಧಗಳನ್ನು ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !