ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣೇಶ್ವರ ಶಿವಾಚಾರ್ಯರಿಗೆ ತುಲಾಭಾರ

Last Updated 19 ಫೆಬ್ರುವರಿ 2022, 4:12 IST
ಅಕ್ಷರ ಗಾತ್ರ

ಚಿಂಚೋಳಿ: ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರ ನಾಣ್ಯಗಳ ಪ್ರಥಮ ತುಲಾಭಾರ ಸೇವೆ ತಾಲ್ಲೂಕಿನ ಅಣವಾರದಲ್ಲಿ ಜರುಗಿತು.

ಪೂಜ್ಯರಿಗೆ ಮಹಿಳೆಯರು ಪೂರ್ಣಕುಂಭದ ಸ್ವಾಗತ ನೀಡಿದ ಬಳಿಕ ಶ್ರೀಗಳ ಪುರಪ್ರವೇಶ ವೈಭವದಿಂದ ನಡೆಯಿತು.

ಕರುಣೇಶ್ವರ ಶಿವಾಚಾರ್ಯ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡ ನಂತರ ಅಣವಾರ ಗ್ರಾಮಕ್ಕೆ ಪ್ರಥಮ ಬಾರಿಗೆ ಬಂದಿರುವ ಪ್ರಯುಕ್ತ ಶ್ರೀಗಳಪುರ ಪ್ರವೇಶ,
ಅಕ್ಕಮಹಾದೇವಿ ಮಹಿಳಾ ಮಂಡಳದ ಮಹಿಳೆಯರಿಂದ ತುಲಾಭಾರ ಹಾಗೂ ಶ್ರೀಗಳ ಮೆರವಣಿಗೆ
ಜಯಘೋಷಗಳ ಮಧ್ಯೆ ನಡೆಯಿತು.

ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರುಣೇಶ್ವರ ಶಿವಾಚಾರ್ಯರು ಭಕ್ತರಿಗೆ ಸನ್ಮಾರ್ಗ ತೋರಿ ಭಕ್ತರನ್ನು ಉದ್ಧರಿಸುತ್ತಿದ್ದಾರೆ. ಶ್ರೀಮಠವನ್ನು ಅಭಿವೃದ್ಧಿ ಪಡಿಸಿ ದಾಸೋಹ ಸೇವೆ ನಡೆಸುತ್ತಿರುವ ಶ್ರೀಗಳು ವಿದ್ಯಾ ಕೇಂದ್ರ ನಡೆಸುತ್ತಿದ್ದಾರೆ
ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಶರಣಪ್ಪ ಶಂಕರ. ಪಟ್ಟಾಧಿಕಾರ ಸ್ವಾಗತ ಸಮಿತಿ ಪ್ರಧಾನ
ಕಾರ್ಯದರ್ಶಿ ಮುಕುಂದ ದೇಶಪಾಂಡೆ, ಪತ್ರಕರ್ತ ಜಗನ್ನಾಥ ಶೇರಿಕಾರ, ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಉಮಾ ಪಾಟೀಲ
ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ದೇಶಮುಖ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಸವರಾಜ ಹಿತ್ತಲ್, ಹಿರಿಯ ಕಲಾವಿದ ರಾಮಯ್ಯಸ್ವಾಮಿ ಐನೋಳ್ಳಿ, ತಾ.ಪಂ. ಮಾಜಿ ಅಧ್ಯಕ್ಷೆ ವೀರಮ್ಮ ಸಂಗಯ್ಯ ಸ್ವಾಮಿ, ಶರಣಯ್ಯ ಅಲ್ಲಾಪುರ, ಸಿದ್ರಾಮಯ್ಯ ಸ್ವಾಮಿ ಮೊದಲಾದವರು ಇದ್ದರು. ಸಂಗಯ್ಯಸ್ವಾಮಿ ಅಣವಾರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT