ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವೈಕ್ಯತೆ ಬೆಸೆಯುವುದು ಶ್ರೀಮಠದ ಧ್ಯೇಯ’

Last Updated 14 ಮಾರ್ಚ್ 2022, 3:55 IST
ಅಕ್ಷರ ಗಾತ್ರ

ಚಿಂಚೋಳಿ: ‘ಹಾರಕೂಡ ಚನ್ನಬಸವ ಶಿವಯೋಗಿಗಳ ಮಠ ಬೇಧಭಾವ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ‘ ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ಪಂಚಲಿಮಗೇಶ್ವರ ಬುಗ್ಗೆ ಮೈದಾನದಲ್ಲಿ ಹಾರಕೂಡ ಚನ್ನಬಸವ ಶಿಯೋಗಿಗಳ 71ನೇ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಶನಿವಾರ ಪಾವನ ಸನ್ನಿಧಾನ ವಹಿಸಿ ಮಾತನಾಡಿದರು.

ಶಿವಾನುಭವ ಚಿಂತನ ಕಾರ್ಯಕ್ರಮ ಅನುಭವ ಮಂಟಪದಂತೆ ಶೋಭಿಸುತ್ತಿದೆ. ಹಾರಕೂಡ ಮಠ ಹಾಗೂ ಶ್ರೀಗಳ ಮೇಲೆ ಭಕ್ತರು ಇಟ್ಟಿರುವ ನಂಬಿಕೆ ಅತ್ಯಂತ ದೊಡ್ಡಗಾಗಿದೆ ಎಂದು ಬಸವ ತಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಸಂಸದ ಉಮೇಶ ಜಾಧವ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್, ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ಮಾತನಾಡಿದರು.

ಢಾಕುಳಗಿ ಶ್ರೀಗಳು, ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಂ ಪಾಟೀಲ, ಸದ್ಭಕ್ತ ಮಂಡಳಿಯ ಅಧ್ಯಕ್ಷ ಕಲ್ಲಪ್ಪ ಹೊಗ್ತಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಪುರಸಭೆ ಅಧ್ಯಕ್ಷೆ ಜಗದೇವಿ ಶಂಕರರಾವ್ ಗಡಂತಿ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಅಜೀತ ಪಾಟೀಲ, ಇಒ ಅನಿಲಕುಮಾರ ರಾಠೋಡ್, ಅಜೀಮುದ್ದಿನ್, ಸಯ್ಯದ್ ಶಬ್ಬೀರ್ ಅಹಮದ್ ಇದ್ದರು. ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಗಡಂತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿ. ಸುಭಾಷ ಸೀಳಿನ್ ವಂದಿಸಿದರು.

ಸಿದ್ದು ಪೂಜಾರಿಗೆ ಬೆಳ್ಳಿ ಕಡಗ:

ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ಬೆಳಮಗಿಯ ಸಿದ್ದು ಪೂಜಾರಿ ಅವರು ಸಿಂಧಗಿಯ ಭಯ್ಯಾಮುದ್ದುಗೌಡ ಅವರನ್ನು ಸೋಳಿಸಿ 5 ತೊಲ ಬೆಳ್ಳಿ ಕಡಗ ಮತ್ತು ನಗದು ₹5ಸಾವಿರ ತನ್ನದಾಗಿಸಿಕೊಂಡರು.

ಹಣಮಂತ ಸಾಲೇಬೀರನಹಳ್ಳಿ ಅವರ ಕುಸ್ತಿ ಗಮನ ಸೆಳೆಯಿತು. ಪಂದ್ಯಾವಳಿಯನ್ನು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲರಾವ್ ಕಟ್ಟಿಮನಿ ಉದ್ಘಾಟಿಸಿದರು. ಪುರಸಭೆ ಉಪಾಧ್ಯಕ್ಷ ಸಯ್ಯದ್ ಶಬ್ಬೀರ್ ಅಹಮದ್, ಸದಸ್ಯ ಅನ್ವರ್ ಖತೀಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ರಾಜಶೇಖರ ಮಜ್ಜಗಿ, ಶಂಕರಗೌಡ ಅಲ್ಲಾಪುರ, ಜಗನ್ನಾಥ ಕಟ್ಟಿ, ರಾಜು ಸಾಲೇಬೀರನಹಳ್ಳಿ, ಸಂತೋಷ ಗಡಂತಿ, ನಾಗರಾಜ ಶೆಳಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT