ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಎಫ್‌ಐಆರ್‌ ಹಿಂಪಡೆಯಲು ಆಗ್ರಹ

Last Updated 14 ಡಿಸೆಂಬರ್ 2021, 3:40 IST
ಅಕ್ಷರ ಗಾತ್ರ

ಚಿಂಚೋಳಿ: ಕುಂಚಾವರಂ ಗ್ರಾಮ ಪಂಚಾಯಿತಿ ಮುಂಭಾಗದ ಉಗ್ರಾಣದ ಗೋಡೆ ಉರುಳಿಸುವ ಸಂಬಂಧ ತಾಲ್ಲೂಕಿನ ಇಒ ಹಾಗೂ ಪಿಡಿಒ ವಿರುದ್ಧ ದಾಖಲಾದ ಎಫ್‌ಐಆರ್‌ ಅನ್ನು ಹಿಂಪಡೆಯಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ತಹಶೀಲ್ದಾರ್ ಅಂಜುಮ ತಬಸ್ಸುಮ್ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.

ಗ್ರಾಮಸ್ಥ ಸಂದೀಪ ಬಕ್ಕಪ್ಪ ಎಂಬುವವರು ಇಲಾಖೆ ಅಧಿಕಾರಿಗ ಳಿಂದ ಅನುಮತಿ ಪಡೆಯದೇ ಸರ್ಕಾರಿ ಕಟ್ಟಡ ಹಾಳು ಮಾಡಲು ಯತ್ನಿಸಿದ್ದರು ಎಂಬ ಆರೋಪ‍ವಿದೆ. ಆರೋಪಿ ಸಂದೀಪ, ಇಒ ಹಾಗೂ ಪಿಡಿಒ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ದೂರಿನಲ್ಲಿ ಇಒ ಮತ್ತು ಪಿಡಿಒ ಹೆಸರುಗಳನ್ನು ಕೈಬಿಡುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ಸಂದೀಪ ಬಕ್ಕಪ್ಪ ಎಂಬುವವರು ಉದ್ದೇಶಪೂರ್ವಕವಾಗಿ ಕಟ್ಟಡ ಒಡೆದಿದ್ದರು. ಅಶೋಕ ಮಸಾನಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಮನ್ಸೂರ್ ಅಲಿ ಅವರು ಅದರ ವಿಚಾರಣೆಗೆ ತೆರಳಿದ್ದರು. ಈ ವೇಳೆ ಸಂದೀಪ, ‘ಕಟ್ಟಡ ಒಡೆಯಲು ಇಒ ಹಾಗೂ ಪಿಡಿಒ ತಿಳಿಸಿದ್ದಾರೆ‘ ಎಂದು ಸುಳ್ಳು ಹೇಳಿದರು. ಆ ಬಳಿಕ ಮಸಾನಿ ಅವರು ಇಒ, ಪಿಡಿಒ ಮತ್ತು ಸಂದೀಪ ಅವರ ವಿರುದ್ಧ ಕುಂಚಾವರಂ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಂಡಪ್ಪ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೇಳಿದರು.

ಗುರುನಾಥ ರಾಠೋಡ್, ತುಕ್ಕಪ್ಪ ಉರಾದಿ, ಶ್ರೀಪತರಾವ, ಜ್ಯೋತಿ ಅನಿಲಕುಮಾರ, ನಾಗೇಂದ್ರ ಬೆಡಕಪಳ್ಳಿ, ಗೋವಿಂದರೆಡ್ಡಿ, ಪವನಕುಮಾರ ಮೇತ್ರಿ, ಸೋಮಶೇಖರ ಅವರಾದಿ, ಗುರುನಾಥರೆಡ್ಡಿ ಹೂವಿನಭಾವಿ, ದಾಸೇಗೌಡ, ಸಾಹೇಬಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT